ಬಂಟ್ವಾಳ: ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ದೇಶಕ್ಕೇ ಆದರ್ಶವಾಗಿದ್ದವರು ಎಂದು ಬಡಗಕಜೆಕಾರಿನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಅವರು ಇಂದಿರಾ ಕ್ಷೇಮನಿಧಿ ಮೂಲಕ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ನ ಬಡಗಕಜೆಕಾರು ಪಂಚಾಯಿತಿ ವತಿಯಿಂದ ಕೊರೊನಾ ಸೋಂಕಿತರ ಮನೆಗಳಿಗೆ ಅಕ್ಕಿ, ದಿನಸಿ ಕಿಟ್ ವಿತರಿಸಿ ಮಾತನಾಡಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪದ್ಮಶೇಖರ ಜೈನ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಗದೀಶ್ ಕೊಯಿಲಾ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಪೂಜಾರಿ ಜೋರಾ, ಗ್ರಾಮ ಪಂಚಾಯತ್ ಅಧ್ಯಕ್ಷ್ಷೆಆಸ್ಮ ಅಜೀಜ್, ಉಪಾಧ್ಯಕ್ಷ ಡೀಕಯ್ಯ ಬಂಗೇರ, ಸದಸ್ಯರಾದ ಜೋನ್ ಸೇರಾ, ರಕ್ಷಿತಾ ಪೂಜಾರಿ, ಮೋಹಿನಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಜಯ ಬಂಗೇರ, ಮುಖಂಡರಾದ ವಾಸು ಪೂಜಾರಿ, ಸುದಾಕರ ಶೆಣೈ, ವಿಶ್ವನಾಥ್ ಪೂಜಾರಿ, ಗಂಗಾಧರ ಪೂಜಾರಿ, ನಾರಯಾಣ ಕಜೆಕಾರ್ ವಿಠಲ ಕರ್ಲ, ಆನಂದ ಮಾಡ, ಶೋಭಾ ಪಾರೊಟ್ಟು, ರಾಕೇಶ್ ಪೂಜಾರಿ ಪಾದೆ, ಅಬ್ದುಲ್ಲಾ, ಹನೀಫ್ ಕೆದೀಲೆ, ಯಾಕುಬ್ ಪಾಂಡವರಕಲ್ಲು, ಜಾನಕಿ ಕಜೆಕಾರ್, ಅಬೂಬಕ್ಕರ್, ಪದ್ಮನಾಭ ಸಾವಂತ್ ಉಪಸ್ಥಿತರಿದ್ದರು.