ಬಂಟ್ವಾಳ: ಬಂಟ್ವಾಳದಲ್ಲ ನಡೆದ ಕಾರ್ಯಕ್ರಮದಲ್ಲಿ ಸೋಮವಾರ ಬೃಹತ್ ಲಸಿಕಾ ಅಭಿಯಾನಕ್ಕೆ ಶಾಸಕ ರಾಜೇಶ್ ನಾಯ್ಕ್ ಚಾಲನೆ ನೀಡಿದರು.
ಲಸಿಕೆ ಅಭಿಯಾನದ ಮೂಲಕ ಲಸಿಕೆ ನೀಡುವಿಕೆಗೆ ಮತ್ತಷ್ಟು ವೇಗ ದೊರಕಿದೆ. ಜಿಲ್ಲೆಯಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿದ್ದು ಆದ್ಯತೆಯ ಮೇಲೆ ಪ್ರತಿಯೊಬ್ಬರಿಗೂ ನೀಡಲಾಗುವುದು, ಈಗಾಗಲೇ ಪ್ರತಿಯೊಂದು ಆರೋಗ್ಯ ಕೇಂದ್ರಗಳ ಮೂಲಕ ಜನರಿಗೆ ಲಸಿಕೆ ನೀಡುವ ಕೆಲಸವಾಗುತ್ತಿದ್ದು, ಫ್ರಂಟ್ ಲೈನ್ ವರ್ಕರ್ಸ್ ಗಳ ಕುಟುಂಬಗಳಿಗೆ 18ರಿಂದ 44ರ ವ್ಯಾಪ್ತಿಯಲ್ಲಿ ಮೊದಲ ಆದ್ಯತೆ ಪ್ರಕಾರ ನೀಡಲಾಗುತ್ತಿದ್ದು, ಶೀಘ್ರದಲ್ಲೇ ತಾಲೂಕಿನ ಎಲ್ಲ ನಾಗರಿಕರಿಗೆ ಲಸಿಕೆ ಒದಗಿಸಲಾಗುತ್ತದೆ ಎಂದವರು ತಿಳಿಸಿದರು. ಇದೇ ಸಂದರ್ಭ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಕೊಡುಗೆಯಾಗಿ ನೀಡಿದ ಹತ್ತು ಪ್ರಾಣವಾಯು ಯಂತ್ರಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಒಂದು ವಾರದೊಳಗೆ ಬಂಟ್ವಾಳ ಆಸ್ಪತ್ರೆಯ ಆವರಣದಲ್ಲಿ ಬೃಹತ್ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆ ಯಾಗಲಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಘಟಕ ಕಾಮಗಾರಿ ವೀಕ್ಷಿಸಿದ ತಿಳಿಸಿದ್ದಾರೆ.
ಬುಡ ಅಧ್ಯಕ್ಷ ದೇವದಾಸ್ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪುಷ್ಪಲತಾ, ವೈದ್ಯರಾದ ಡಾ. ಕಿಶೋರ್, ಡಾ,ವೇಣುಗೋಪಾಲ ,ಡಾ, ಚೇತನ್, ಡಾ, ಸಂದೀಪ್ ಎ.ಎಸ್. ಸಂದೀಪ್ ಕುಡ್ವ , ಡಾ. ಪಾವನ, ಶಾಸಕರ ಕಚೇರಿ ವಾರ್ ರೂಮ್ ಪ್ರಮುಖರಾದ ಪ್ರಕಾಶ್ ಅಂಚನ್, ಪುರುಷೋತ್ತಮ ಶೆಟ್ಟಿ ವಾಮದಪದವು, ನಂದರಾಮ ರೈ, ಕೇಶವ ದೈಪಲ, ಮಹೇಶ್ ಶೆಟ್ಟಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.