ಬಂಟ್ವಾಳ: ರಾಯಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ. ಹಾಗೂ ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಸಹಯೋಗದಲ್ಲಿ ಇಲ್ಲಿಗೆ ಅವಶ್ಯಕವಾಗಿರುವ 2000 ಲೀ ನೀರು ಸಂಗ್ರಹಣೆ ಸಾಮರ್ಥ್ಯದ ಟ್ಯಾಂಕ್ ನ್ನೂ ವೈದ್ಯಾ ಧಿಕಾರಿ ಮತ್ತು ಸಿಬ್ಬಂದಿ ವರ್ಗದ ಸಮ್ಮುಖ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ರಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಶ್ಮೀತ್ ಶೆಟ್ಟಿ, ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು. ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಅಧ್ಯಕ್ಷರಾದ ಮೈಕಲ್ ಡಿ ‘ಕೊಸ್ತ, ರಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮನೋನ್ಮಣಿ ರಾಯಿ, ಗ್ರಾಮ ಪಂಚಾಯತ್ ಸದಸ್ಯ ಸಂತೋಷ ಗೌಡ, ಸಿದ್ದಕಟ್ಟೆ ಸಹಕಾರಿ ಸಂಘದ ನಿರ್ದೇಶಕರಾದ ಹರೀಶ್ ಆಚಾರ್ಯ ರಾಯಿ, ರಾಜೇಶ್ ಶೆಟ್ಟಿ ಕೊನೆರೋಟ್ಟು, ಮಾದವ ಶೆಟ್ಟಿಗಾರ್, ಮಂದಾರತಿ ಶೆಟ್ಟಿ, ರೋಟರಿ ಕ್ಲಬ್ ಸದಸ್ಯರಾದ ಶಿವಯ್ಯ.ಎಸ್. ಎಲ್., ಮೋಹನ್ ಜಿ ಮುಲ್ಯ, ವಾಸುದೇವ ಆಚಾರ್ಯ, ರಾಜೇಶ್ ನೆಲ್ಯಾಡಿ, ದಿನೇಶ್ ಸುವರ್ಣ ರಾಯಿ, ಎಚ್. ಎ. ರೆಹಮಾನ್ ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯ ಬಸಯ್ಯ ಸ್ವಾಗತಿಸಿ ವಂದಿಸಿದರು