ಬಂಟ್ವಾಳ: ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಜಿಪ ಮೂಡ ಮತ್ತು ಮುನ್ನೂರು ಗ್ರಾಮ ಸಮಿತಿ ವತಿಯಿಂದ ಕೇಂದ್ರ ಸರಕಾರ ತೈಲಬೆಲೆ ಏರಿಕೆ ವಿರುದ್ದ ಬೆಂಕ್ಯ ಜಂಕ್ಷನ್ ನಲ್ಲಿ ಕಾರ್ ಮತ್ತು ದ್ವಿಚಕ್ರ ವಾಹನನ್ನು ತಳ್ಳುವ ಮೂಲಕ ಪ್ರತಿಭ ಟನೆ ನಡೆಯಿತು. ಪ್ರತಿಭಟನೆಯ ಅಧ್ಯಕ್ಷತೆಯನ್ನು ಗ್ರಾಮ ಸಮಿತಿ ಅಧ್ಯಕ್ಷರಾದ ಫಾರೂಕ್ ಅಲಾಡಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ಗ್ರಾಮ ಸಮಿತಿ ಸದಸ್ಯ ರಾದ ಮುಬಾರಕ್ ಕಾರಜೆ ಮಾತಾಡಿದರು. ಮುಖ್ಯ ಅತಿಥಿಯಾಗಿ ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಬೀನ ಹಮೀದ್ ಸಭೆಯನ್ನು ಉದ್ದೇಶಿಸಿ ಕೋವಿಡ್ ಮಹಾ ಮಾರಿ ಸಂದರ್ಭದಲ್ಲಿ ಸರ್ಕಾರದ ವೈಫಲ್ಯ ಮತ್ತು ಬೆಲೆ ಏರಿಕೆ ವಿಚಾರದಲ್ಲಿ ಮಾತಾಡಿದರು. ಈ ಸಂದರ್ಭ ಪಂಚಾಯತ್ ಸದಸ್ಯೆಯಾದ ನೌರೀನ್ ಸಲೀಂ, ಕ್ಷೆತ್ರ ಸಮಿತಿ ಜೊತೆ ಕಾರ್ಯದರ್ಶಿ ಸಲೀಂ ಅಲಾಡಿ, ಎಸ್ ಡಿ ಟಿ ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲಿಕ್ ಕೊಳಕೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮಜೀದ್ ಅಲಾಡಿ, ಶರೀಫ್ ಕೊಪ್ಪಳ ಹಮೀದ್ ನಂದವಾರ,ಉಪಸ್ಥಿತರಿದ್ದರು. ಸಲೀಂ ಅಲಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.