ಜೀಪ್ ಒಂದಕ್ಕೆ ಹಗ್ಗ ಕಟ್ಟಿ ಎಳೆಯುವ ಮೂಲಕ ದೇಶದಲ್ಲಿ ತೈಲಬೆಲೆ ಏರಿಕೆಯಾಗಿದೆ ಎಂಬುದನ್ನು ಸಾಂಕೇತಿಕವಾಗಿ ಪ್ರದರ್ಶಿಸುವ ಮೂಲಕ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪ ಮಂಗಳಪದವು ಪೆಟ್ರೋಲ್ ಪಂಪ್ ಮುಂಭಾಗ ಡಿವೈಎಫ್ ಐ ಮಂಗಳವಾರ ಪ್ರತಿಭಟನೆ ನಡೆಸಿತು.
ಸಿಪಿಎಂ ಬಂಟ್ವಾಳ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ ಈ ಸಂದರ್ಭ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ವಿರುದ್ಧ ದೊಡ್ಡ ಮಟ್ಟದ ಜನಾಂದೋಲನ ನಡೆಯಬೇಕು ಎಂದರು.
ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ತುಳಸೀದಾಸ್ ವಿಟ್ಲ, ರಿಕ್ಷಾ ಚಾಲಕರ ಸಂಘದ ಕಾರ್ಯದರ್ಶಿ ರಝಾಕ್ ಕೆಲಿಂಜ , ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ಮುಖಂಡರಾದ ಸಲೀಂ ಮಲಿಕ್, ಸಲ್ಮಾನ್ ಪಿ.ಬಿ,ಜಮೀಲ್, ಇರ್ಪಾನ್ ,ಇಬ್ರಾಹಿಂ ಭಾಸಿಂ ನೇತೃತ್ವ ವಹಿಸಿದ್ದರು. ಸುಲೈಮಾನ್ ಪೆಲತ್ತಡ್ಕ, ಹನೀಪ್ ಕೆಲಿಂಜ, ಹನೀಪ್ ಆಲಂಗಾರ್, ಸಮೀರ್ ಪಾತ್ರತೋಟ, ಸಾಭಿತ್ ಕೆಲಿಂಜ, ಅಝಿಝ್ ಕೆಳಿಂಜ, ಸಿನಾನ್, ಅಝೀಝ್ ಪೆಲತ್ತಡ್ಕ, ಸವಾದ್ ಕೋಲ್ಪೆ , ಶಾಕೀರ್ ಖಾನ್, ಲಿಯಕತ್ ಖಾನ್, ಮೊಹಿದಿನ್ ಕೆದುಮೂಲೆ. ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…