ಕೊರೊನಾ ವಾರಿಯರ್ಸ್‌ಗಳಲ್ಲಿ ವಿಶ್ವಾಸ, ಆತ್ಮಸ್ಥೈರ್ಯ ಹೆಚ್ಚಿಸಿ, ಸಹಕಾರ ಮನೋಭಾವನೆ ಇಟ್ಟುಕೊಂಡು ಪ್ರೋತ್ಸಾಹಿಸುವ ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘದ ಕಾರ್ಯ ಶ್ಲಾಘನೀಯ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದರು.
ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘದ ವತಿಯಿಂದ ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾ ಭವನದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ, ಮತ್ತು ಕೊರೊನಾ ಪೀಡಿತ ಬಿಪಿಎಲ್ ಕಾರ್ಡುದಾರ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು.
ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ, ಬಾಳ್ತಿಲ, ಗೋಳ್ತಮಜಲು, ಅಮ್ಟೂರು, ವೀರಕಂಭ ಮತ್ತು ಬೋಳಂತೂರು ಗ್ರಾಮಗಳ ೨೩ ಆಶಾಕಾರ್ಯಕರ್ತೆಯರಿಗೆ, ಪ್ರೋತ್ಸಾಹಧನ ಮತ್ತು ಕೊರೊನಾ ಪೀಡಿತ ಬಿಪಿಎಲ್ ಕುಟುಂಬಗಳ ೮೦ ಮನೆಗಳಿಗೆ ಸಂಘದ ವತಿಯಿಂದ ಆಹಾರ ಕಿಟ್ ವಿತರಿಸುವುದೆಂದು ತಿಳಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಬಿ.ಸುಧಾಕರ ರೈ, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬಿಷೇಕ್ ಶೆಟ್ಟಿ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹಿರಣ್ಮಯಿ, ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್, ಗೋಳ್ತಮಜಲು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಕ್ಷ್ಮೀ ವಿ.ಪ್ರಭು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಂಘದ ಎಲ್ಲಾ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಕಾರಿ ಸುರೇಶ್.ಕೆ ಉಪಸ್ಥಿತರಿದ್ದರು.