ವಿಟ್ಲ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿಟ್ಲ ಜಿಲ್ಲೆ ಸಮಿತಿ ವತಿಯಿಂದ ಕಲ್ಲಡ್ಕ, ವಿಟ್ಲ, ಸಾಲೆತ್ತೂರು, ಸಜಿಪ, ಅಡ್ಯನಡ್ಕ ಮತ್ತಿತರ ಸ್ಥಳಗಳಲ್ಲಿ ಸೋಮವಾರ ಪ್ರತಿಭಟನೆ ನಡೆದಿದೆ, ಫ್ರಂಟ್ ನ ನಾಯಕರಾದ ಆತಿಕುರ್ರಹ್ಮಾನ್,ಮಸೂದ್ ಹಾಗೂ ಪತ್ರಕರ್ತ ಸಿದ್ದೀಕ್ ಕಪ್ಪನ್ , ಆಲಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವೂಫ್ ಶರೀಫ್ ಅವರ ಬಂಧನವಾಗಿ 250 ದಿನಗಳಾದ ಹಿನ್ನೆಲೆಯಲ್ಲಿ ಇದನ್ನು ಖಂಡಿಸಿ ರಾಷ್ಟ್ರಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಈ ಪ್ರತಿಭಟನೆಯಾಗಿದೆ, ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ವಿಟ್ಲ ಜಿಲ್ಲಾಧ್ಯಕ್ಷ ಫಯಾಜ್ ಕಲ್ಲಡ್ಕ ಈ ಸಂದರ್ಭ ಹೇಳಿದ್ದಾರೆ. ಉಪಾಧ್ಯಕ್ಷ ಸಂಶುದ್ದೀನ್, ಉಪ ಕಾರ್ಯದರ್ಶಿ ಇರ್ಶಾದ್ ಮತ್ತು ಸಮಿತಿ ಸದಸ್ಯರಾದ ಮುಕ್ತಾರ್, ಹಕಮ್, ನಿಸಾರ್, ಫಯಝ್ ಹಾಗೂ ಯುನಿಟ್ ನಾಯಕರು ಕೂಡ ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…