ವಾಮದಪದವು

ಕೃಷಿ ಯಾಂತ್ರೀಕರಣ ಉಪ ಅಭಿಯಾನದಲ್ಲಿ ಸಿದ್ದಕಟ್ಟೆ ಸ.ವ್ಯ.ಸಂಘಕ್ಕೆ ಬಾಡಿಗೆ ಸೇವಾ ಕೇಂದ್ರ ಟ್ರ್ಯಾಕ್ಟರ್ ಹಸ್ತಾಂತರ

ಬಂಟ್ವಾಳ: ಕೃಷಿ ಇಲಾಖೆಯಿಂದ (ಎಸ್‌ಎಂಎಎಂ)ಬಂಟ್ವಾಳ ತಾ. ಕೃಷಿ ಇಲಾಖೆಯ ನೆರವಿನಿಂದ ಸಿದ್ದ್ಧಕಟ್ಟೆ ಸಹಕಾರಿ ವ್ಯಾವಸಾಯಿಕ ಸಂಘಕ್ಕೆ ಟ್ರಾಕ್ಟರ್ ಉಪಕರಣಗಳ ಬಾಡಿಗೆ ಸೇವಾಕೇಂದ್ರ ಹಸ್ತಾಂತರ ಕಾರ್ಯಕ್ರಮ ಸಂಘದ ವಠಾರದಲ್ಲಿ ಶನಿವಾರ ಜರಗಿತು.
 ಪ್ರಗತಿಪರ ಕೃಷಿಕ, ಎಪಿಎಂಸಿ ಮಾಜಿ ಸದಸ್ಯ ರತ್ನ ಕುಮಾರ್ ಚೌಟ ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ಪ್ರಪುಲ್ಲ ರೈ  ಮತ್ತು ಎ.ಗೋಪಿನಾಥ ರೈ, ಅವರು ಟ್ರಾಕ್ಟರ್‌ಗಳ ಚಾಲಕರಿಗೆ ಛಾವಿ ಹಸ್ತಾಂತರಿಸಿದರು.    
   ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು, ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರ ಸಹಕಾರಿ ಸಂಘದ ಮೂಲಕ ಬಂಟ್ವಾಳ ತಾಲೂಕಿನಲ್ಲಿ ಪ್ರಥಮವಾಗಿ ಅನುಷ್ಠಾನಗೊಂಡಿದೆ. ಸಂಘದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಹಡೀಲು ಬಿದ್ದ ಕೃಷಿ ಭೂಮಿಗಳಲ್ಲಿ ಕೃಷಿ ಕಾರ್ಯ ಚಟುವಟಿಕೆಗೆ ಈ ಬಾಡಿಗೆ ಸೇವಾ ಕೇಂದ್ರ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ಹಾಗೂ ಸಂಘದ ವ್ಯಾಪ್ತಿಯ ಕೃಷಿಕರಿಗೆ ಇದು ನೆರವಾಗಲಿದೆ ಎಂದು ಹೇಳಿದರು.
 ಬಂಟ್ವಾಳ ಕೃಷಿ ಇಲಾಖೆಯ ಅಧಿಕಾರಿ ನಂದನ್ ಶೆಣೈ ಮಾತನಾಡಿ, ಕೃಷಿ ಯಾಂತ್ರೀಕರಣ ಉಪ ಅಭಿಯಾನದಡಿ ಸಹಕಾರಿ ಸಂಘಕ್ಕೆ ತಾಲೂಕಿಗೆ ಪ್ರಥಮವಾಗಿ 27 ಎಚ್‌ಪಿ ಸಾಮರ್ಥ್ಯದ ಒಟ್ಟು 11 ಲಕ್ಷ ರೂ. ವೆಚ್ಚದ 2 ಟ್ರಾಕ್ಟರ್ ಹಾಗೂ ಅದರ ಕೇಜ್‌ವೀಲ್ ಮತ್ತು ಕಲ್ಟಿವೇಟರ್‌ಗಳನ್ನು ಒದಗಿಸಲಾಗಿದೆ. ಶೇ.80 ಸಬ್ಸಿಡಿಯಿದ್ದು, ಉಳಿದ ವೆಚ್ಚ ಸಂಘ ಭರಿಸಿದೆ. ಇದು ಕೃಷಿಕರಿಗೆ ಉಳುಮೆಗೆ ರಿಯಾಯಿತಿ ದರದಲ್ಲಿ ದೊರಕಲಿದೆ ಎಂದರು.

ಸಂಘದ ಉಪಾಧ್ಯಕ್ಷ ಸತೀಶ ಪೂಜಾರಿ ಹಲಕ್ಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಆರ್.ಪೂಜಾರಿ, ಸಂಘಬೆಟ್ಟು ಗ್ರಾ.ಪಂ. ಉಪಾಧ್ಯಕ್ಷೆ ವಿಮಲಾ ಮೋಹನ್, ರಾಯಿ ಗ್ರಾ.ಪಂ. ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ,  ಸಂಘದ ನಿರ್ದೇಶಕರಾದ  ಸಂದೇಶ್  ಶೆಟ್ಟಿ ಪೊಡುಂಬ,  ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಹರೀಶ್ ಆಚಾರ್ಯ  ರಾಯಿ, ದಿನೇಶ್ ಪೂಜಾರಿ, ಉಮೇಶ್  ಗೌಡ, ದೇವರಾಜ್  ಸಾಲ್ಯಾನ್, ವೀರಪ್ಪ  ಪರವ, ಜಾರಪ್ಪ  ನಾಯ್ಕ, ಮಂದಾರತಿ  ಶೆಟ್ಟಿ, ಅರುಣಾ ಎಸ್.ಶೆಟ್ಟಿ, ಮಾಧವ ಶೆಟ್ಟಿಗಾರ್, ಕೇಶವ ಕಿಣಿ ಎಚ್., ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್, ಸಂಗಬೆಟ್ಟು ಗ್ರಾ.ಪಂ.ಸದಸ್ಯರಾದ ವಿದ್ಯಾ ಪ್ರಭು,ದಾಮೋದರ ಪೂಜಾರಿ, ಸುರೇಶ್ ಕುಲಾಲ್, ಭೂ ಅಭಿವೃದ್ಧಿ ಬ್ಯಾಂಕ್‌ನಿರ್ದೇಶಕ ಲಿಂಗಪ್ಪ ಪೂಜಾರಿ, ಪ್ರಮುಖರಾದ ಶ್ರೀಧರ ಎಸ್.ಪಿ. ದಿನೇಶ್ ಶೆಟ್ಟಿ ದಂಬೆದಾರ್‌ ಮತ್ತಿತರರು ಉಪಸ್ಥಿತರಿದ್ದರು

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ