ಬಂಟ್ವಾಳ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೋದಿ ಹಾಗೂ ಅವರ ಬಿಜೆಪಿ ಸರಕಾರದ ನಡೆಯ ಬಗ್ಗೆ ನಿರಂತರವಾಗಿ ನೀಡುತ್ತಲೇ ಬಂದಿರುವ ಎಚ್ಚರಿಕೆ ಹೇಳಿಕೆಗಳು ಇಂದು ಅಕ್ಷರಶಃ ಇಡೀ ದೇಶಕ್ಕೆ ಅರ್ಥವಾಗುತ್ತಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಇಂಧನ ಬೆಲೆ ಏರಿಕೆ ವಿರುದ್ಧ ಮೆಲ್ಕಾರ್ ರಚನಾ ಪೆಟ್ರೋಲ್ ಬಂಕ್ ಮುಂಭಾಗ ಶನಿವಾರ ಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾರ್ಮಿಕರ ಘಟಕ ಹಾಗೂ ಪಾಣೆಮಂಗಳೂರು ವಲಯ ಕಾಂಗ್ರೆಸ್ ಸಮಿತಿ ಇವುಗಳ ಜಂಟಿ ಆಶ್ರಯದಲ್ಲಿ ನಡೆದ 100 ನಾಟೌಟ್’ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಘಟಕದ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಮಾತನಾಡಿ, ಬಿಜೆಪಿ ನಾಯಕರಿಗೆ ಸರಕಾರ ನಡೆಸಲೇ ಗೊತ್ತಿಲ್ಲ ಎಂಬುದಕ್ಕೆ ಈಗಿನ ಆರ್ಥಿಕ ಅಸ್ಥಿರತೆ ಇಂಧನ ಬೆಲೆ ಏರಿಕೆಯೆ ಸಾಕ್ಷಿ. ಅಸಂಘಟಿತ ಕಾರ್ಮಿಕರಿಗೆ ಸರಕಾರ ಯಾವುದೇ ಜೀವನ ಭದ್ರತೆ ನೀಡಿಲ್ಲ ಎಂದರು.ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಣೆಮಂಗಳೂರು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇಕ್ಬಾಲ್ ಜೆಟಿಟಿ, ತಾ ಪಂ ಮಾಜಿ ಸದಸ್ಯ ಶರೀಫ್ ಆಲಾಡಿ, ಇರಾ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಝಾಕ್ ಕುಕ್ಕಾಜೆ, ಪ್ರಮುಖರಾದ ಅರುಣ್ ಶೆಟ್ಟಿ, ಸತೀಶ್ ಮೆಲ್ಕಾರ್, ಮಧು ಭಟ್ ಬೊಂಡಾಲ, ಮುತಾಲಿಬ್ ಆಲಡ್ಕ, ನೌಫಲ್ ಬಂಗ್ಲೆಗುಡ್ಡೆ, ರಶೀದ್ ಕತಾರ್, ತನ್ವೀರ್ ಬೋಗೋಡಿ, ಹಬೀಬ್ ಬಂಗ್ಲೆಗುಡ್ಡೆ, ಆಬಿದ್ ಬೋಗೋಡಿ, ಗಫೂರ್ ಜೆಇಟಿ, ನೌಶಾದ್ ತನ್ನಚ್ಚಿಲ್, ಬದ್ರುದ್ದೀನ್ ಆಲಡ್ಕ, ಮುಹ್ಸಿನ್ ಬೋಗೋಡಿ, ಮೊಯಿದಿ ಬೋಗೋಡಿ, ಬ್ಯಾಪ್ಟಿಸ್ಟ್ ಡಿಕುನ್ಹಾ, ರಾಯ್ ಡಿಸೋಜ ಮೊದಲಾದವರು ಭಾಗವಹಿಸಿದ್ದರು. ಪಾಣೆಮಂಗಳೂರು ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ಶರೀಫ್ ಭೂಯಾ ಸ್ವಾಗತಿಸಿ, ವಂದಿಸಿದರು.