ಬಂಟ್ವಾಳ: ರಾಯಿ, ಅರಳ ಗ್ರಾಪಂ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ರಾಯಿಯಲ್ಲಿ ಶುಕ್ರವಾರ, ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಮತ್ತು ರಾಯಿ ಹಾಲು ಉತ್ಪಾದಕರ ಸಂಘ ವತಿಯಿಂದ ಆಹಾರ ಕಿಟ್ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಯಿತು.
ಸಿದ್ಧಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷರಾದ ಮೈಕಲ್ ಡಿಕೋಸ್ತ, ಕಾರ್ಯದರ್ಶಿ ರಾಜೇಶ್ ನೆಲ್ಯಾಡಿ, ರಾಯಿ ಪಿಡಿಒ ಮಧು, ರಾಯಿ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಚಂದ್ರಶೇಖರ್ ಗೌಡ, ಪದ್ಮನಾಭ ಗೌಡ, ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತ್ನ, ಉಪಾಧ್ಯಕ್ಷರಾದ ರಶ್ಮಿತ್ ಶೆಟ್ಟಿ ಕೈತ್ರೋಡಿ, ರೋಟೇರಿಯನ್ ಗಳಾದ ಹರೀಶ್ ಆಚಾರ್ಯ ರಾಯಿ, ಮೋಹನ್ ಜಿ ಮೂಲ್ಯ, ಸುನಿಲ್ ಸಿಕ್ವೇರಾ, ದಿನೇಶ್ ಸುವರ್ಣ ರಾಯಿ , ಭೋಜ ಮೂಲ್ಯ, ರವೀಂದ್ರ ಪೂಜಾರಿ ಬದನಡಿ, ಗ್ರಾಮ ಪಂಚಾಯತ್ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಕೋವಿಡ್ ಟಾಸ್ಕ್ ಫೋರ್ಸ್ ನ ಸದಸ್ಯರು ಹಾಜರಿದ್ದರು. ಅನಾರೋಗ್ಯದಿಂದ ಬಳಲುತ್ತಿರುವ ವಿಶ್ವನಾಥ ಪೂಜಾರಿ ರಾಯಿ ದೈಲಾ ಮನೆಗೂ ಆಹಾರದ ಕಿಟ್ಟನ್ನು ವಿತರಿಸಲಾಯಿತು.