ಬಂಟ್ವಾಳ: ಬಂಟ್ವಾಳ ಜಿಎಸ್‌ಬಿ ಯುವಕರ ವತಿಯಿಂದ ಕೈಕಂಬದ ಬಪ್ಪುಗುಡ್ಡೆಯಲ್ಲಿರುವ ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಫಾಗಿಂಗ್ ಯಂತ್ರವನ್ನು ನೀಡಲಾಯಿತು.ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ, ಅಶ್ವಿನಿ ಅವರಿಗೆ ಯಂತ್ರವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಶೆಣೈ, ಪ್ರಮುಖರಾದ ಕೆ. ಸದಾಶಿವ ಪ್ರಭು, ಅವಿನಾಶ್ ಕಾಮತ್, ವೆಂಕಟರಮಣ ಆಚಾರ್ಯ, ಗುರುಪ್ರಸಾದ್ ಶೆಣೈ, ಕಾರ್ತಿಕೇಯ ಪೈ ಮೊದಲಾದವರು ಉಪಸ್ಥಿತರಿದ್ದರು
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…