ಬಂಟ್ವಾಳ: ಕೊರೊನಾ ವಾರಿಯರ್ಸ್ ಆಗಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವುದು ಹಾಗೂ ಅಂತ್ಯಕ್ರಿಯೆಗೆ ನೆರವಾಗುವವರಿಗೆ ಆದ್ಯತೆ ಮೇರೆಗೆ ವಾಕ್ಸೀನ್ ಒದಗಿಸುವಂತೆ ಎಸ್.ಡಿ.ಪಿ.ಐ. ಮನವಿ ಮಾಡಿದೆ.
ವಾರಿಯರ್ಸ್ ಆಗಿ ಆಂಬುಲೆನ್ಸ್ ಮೂಲಕ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವುದು ಔಷಧಿ ಸಾಮಗ್ರಿಗಳನ್ನು ಮನೆಗೆ ತಲುಪಿಸುವುದು ಶವಗಳನ್ನು ಎಲ್ಲಾ ಧರ್ಮದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುವುದು ಹಾಗೂ ಅನೇಕ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ,ಎಸ್ ಕೆ ಎಸ್ ಎಸ್ ಫ್ ವಿಖಾಯ ತಂಡ .ಎಸ್ಎಸ್ಎಫ್ ಸಹಾಯ ತಂಡ .ಜಮಾತೆ ಇಸ್ಲಾಂನ ಎಚ್.ಐ.ಎಫ್ ಮತ್ತು ಮಹಿಳೆಯರ ಎನ್.ಡಬ್ಲ್ಯುಎಫ್ ತಂಡ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಕಾರ್ಯಕರ್ತರ ಕೆಲಸ ಪರಿಗಣಿಸಿ ಸರಕಾರದಿಂದ ಕೊಡುವಂತ ಕೋವಾಕ್ಸ್ ಇನ್ ನನ್ನು ಯಾವುದೇ ಶುಲ್ಕವನ್ನು ವಿಧಿಸದೆ ಮೊಟ್ಟಮೊದಲನೆಯದಾಗಿ ಆದ್ಯತೆ ನೀಡಬೇಕೆಂದು ಮತ್ತು ಈ ಸಂದರ್ಭದಲ್ಲಿ ಉಪಯೋಗ ವಾಗುವ ಅಗತ್ಯ ವೈದ್ಯಕೀಯ ಕಿಟ್ ನೀಡಬೇಕೆಂದು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಕ್ಷೇತ್ರ ಅಧ್ಯಕ್ಷರಾದ ಯೂಸುಫ್ ಅಲಡ್ಕ ಕ್ಷೇತ್ರ ಉಪಾಧ್ಯಕ್ಷರಾದ ಉಬೈದ್ ಬಂಟ್ವಾಳ, ಕಾರ್ಯದರ್ಶಿ ಖಲದರ್ ಪರ್ತಿಪ್ಪಾಡಿ, ಜೊತೆ ಕಾರ್ಯದರ್ಶಿ ಸಲೀಂ ಆಲಾಡಿ ಉಪಸ್ಥಿತರಿದ್ದರು.