ಬಂಟ್ವಾಳ: ಸೇವಾ ಭಾರತಿ ಬಂಟ್ವಾಳ ತಾಲೂಕು ಮತ್ತು ಹಿಂದೂ ಜಾಗರಣಾ ವೇದಿಕೆ ತುಂಬೆ ಘಟಕ ಇದರ ಆಶ್ರಯದಲ್ಲಿ ಬಿ.ಸಿ ರೋಡಿನ ಶಿಶು ಮಂದಿರದಲ್ಲಿ ಅಶಕ್ತರಿಗೆ “ಆರೋಗ್ಯ ನಿಧಿ ಸಮರ್ಪಣಾ” ಕಾರ್ಯಕ್ರಮ ಭಾನುವಾರ ನಡೆಯಿತು.
ಈ ಸಂದರ್ಭದಲ್ಲಿ ಆರು ಮಂದಿ ಫಲಾನುಭವಿಗಳಿಗೆ ಆರೋಗ್ಯ ನಿಧಿ ಹಾಗೂ ತಾಲೂಕು ಅಂಬ್ಯುಲೆನ್ಸ್ ವ್ಯವಸ್ಥೆಗೆ ಒಟ್ಟು 2,50 ಲಕ್ಷ ರೂ. ವಿತರಿಸಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಸಂಘ ಚಾಲಕ್ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಅವರು ಈ ಸರಳ ಕಾರ್ಯಕ್ರಮವನ್ನು ಉದ್ಘಾಟಿಸಿ ಕೋವಿಡ್ ನಂತಹ ಈ ಕಾಲಘಟ್ಟದಲ್ಲಿ ಸೇವಾಭಾರತಿ ಹಾಗು ಹಿ.ಜಾ.ವೇ.ಕಾರ್ಯಕರ್ತರ ಸೇವೆಯನ್ನು ಶ್ಲಾಘಸಿದರು. ಆರ್ ಎಸ್ ಎಸ್ ನ ಮಂಗಳೂರು ವಿಭಾಗದ ಸಹ ಕಾರ್ಯವಾಹ ಜಗದೀಶ್ ಕಲ್ಲಡ್ಕ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಸಾಮಾಜಿಕ ಕಾರ್ಯಕರ್ತರಾದ ತೇವು ತಾರಾನಾಥ ಕೊಟ್ಟಾರಿ, ಉದ್ಯಮಿ ಜಯಪ್ರಕಾಶ್ ತುಂಬೆ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ ತುಂಬೆ, ಹಿ.ಜಾ.ವೇ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವಿರಾಜ್ ಬಿ.ಸಿ.ರೋಡು, ಜಿಲ್ಲಾಧ್ಯಕ್ಷರಾದ ಜಗದೀಶ್ ಹೊಳ್ಳರಬೈಲು ವೇದಿಕೆಯಲ್ಲಿದ್ದರು.
ಜಿಲ್ಲಾ ಕಾರ್ಯವಾಹ ವಿನೋದ್ ಕುಮಾರ್ ಕೊಡ್ಮಾಣ್, ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ್ ದಾಸ್ ಬಂಟ್ವಾಳ, ಕಳ್ಳಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ, ಹಿಂ.ಜಾ.ವೇ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ಮಂಗಳೂರು ವಿಭಾಗ ಸಂಪರ್ಕ ಪ್ರಮುಖ್ ರತ್ನಾಕರ ಶೆಟ್ಟಿ ಕಲ್ಲಡ್ಕ, ಹಿಂದೂ ಯುವ ವಾಹಿನಿ ಸಂಯೋಜಕ ಪ್ರಶಾಂತ್ ಕೆಂಪುಗುಡ್ಡೆ ಸೇರಿದಂತೆ ಪ್ರಮುಖ ಜವಾಬ್ದಾರಿ ಹೊಂದಿರುವ ಕಾರ್ಯಕರ್ತರು ಉಪಸ್ಥಿತರಿದ್ದರು. ದೀಕ್ಷಿತ್ ಬಡಗಬೆಳ್ಳೂರು ವೈಯಕ್ತಿಕ ಗೀತೆ ಹಾಡಿದರು, ಸುಶಾನ್ ಬೊಳ್ಳಾರಿ ಸ್ವಾಗತಿಸಿ, ಜಗದೀಶ್ ಕಡೆಗೋಳಿ ನಿರೂಪಿಸಿದರು.