ರೇಷನ್ ಸಮಸ್ಯೆ ನಿವಾರಿಸಿ, ಸಂಕಷ್ಟದ ಸ್ಥಿತಿಯಲ್ಲಿ ಯಾರೂ ಹಸಿವಿನಿಂದ ಇರದಂತೆ ನೋಡಿಕೊಳ್ಳಿ – ಸರ್ಕಾರಕ್ಕೆ ಸಲಹೆ
ಬಂಟ್ವಾಳ: ಅರ್ಜಿ ಸಲ್ಲಿಸಿದವರಿಗೆ ಪಡಿತರ ಚೀಟಿ ಕೊಡದ ರಾಜ್ಯ ಸರಕಾರವು ಇರುವ ಪಡಿತರ ಚೀಟಿಗಳನ್ನೇ ರದ್ದು ಮಾಡುತ್ತಿದೆ. ಹೀಗಾಗಿ ಪಡಿತರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಇದನ್ನು ಸರಿಪಡಿಸಿ ಎಂದು ಶಾಸಕ ಯು.ಟಿ.ಖಾದರ್ ಎಂದು ಒತ್ತಾಯಿಸಿದ್ದಾರೆ.
ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ನಾವು ಮಾಡಿದ ವ್ಯವಸ್ಥೆಯನ್ನು ಮುಂದುವರಿಸುವ ಆಸಕ್ತಿ ಪ್ರಸ್ತುತ ಸರಕಾರಕ್ಕೆ ಇಲ್ಲವಾಗಿದೆ. ಸರಕಾರಕ್ಕೆ ರೇಶನ್ ಕಾರ್ಡ್ ಕಟ್ ಮಾಡುವ ಆಸಕ್ತಿ ಕಾರ್ಡ್ ವಿತರಣೆಗೆ ಇಲ್ಲವಾಗಿದೆ. ಈ ಎರಡು ತಿಂಗಳಲ್ಲಿ ಎಪಿಎಲ್-ಬಿಪಿಎಲ್ ಎಂದು ನೋಡದೆ ಯಾರು ನ್ಯಾಯ ಬೆಲೆ ಅಂಗಡಿಯ ಮುಂದೆ ನಿಲ್ಲುತ್ತಾನೋ ಅವರಿಗೆ ಅಕ್ಕಿ ಕೊಡುವುದು ಸರಕಾರದ ಜವಾಬ್ದಾರಿಯಾಗಿದೆ ಎಂದರು.ರಾಜ್ಯ ಸರಕಾರವು ಕೋವಿಡ್ ಸಂದರ್ಭ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಅದರಲ್ಲಿ ಕರಾವಳಿಯ ಆಧಾರ ಸ್ತಂಭ ಮೀನುಗಾರರನ್ನು ಕಡೆಗಣಿಸಿರುವುದು ಖಂಡಿನೀಯ ಎಂದ ಅವರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರ ವೇತನ ಬಾರದೇ ಇದ್ದು, ಇದನ್ನು ಸರಕಾರದ ಗಮನಕ್ಕೆ ತರಲಾಗಿದೆ. ಜತೆಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುರುವ ಇ-ಸರ್ವೇಯ ಜವಾಬ್ದಾರಿಯನ್ನು ಮುಂದಕ್ಕೆ ಹಾಕಲು ಆಗ್ರಹಿಸಲಾಗಿದೆ ಎಂದರು. ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆಯಲ್ಲಿ ೫೦ ಬೆಡ್, ಯೆನಪೋಯ ಸಂಸ್ಥೆಯ ಅಪಾರ್ಟ್ಮೆಂಟ್‌ನಲ್ಲಿ ೭೦ ಬೆಡ್ ಹಾಗೂ ಯುನಿವರ್ಸಿಟಿಯ ಹಾಸ್ಟೆಲ್‌ನಲ್ಲಿ 100 ಬೆಡ್‌ಗಳ ವಿಶ್ರಾಂತಿ ಕೇಂದ್ರಗಳನ್ನು ಮಾಡಲಾಗಿದೆ ಎಂದರು.