ಬಂಟ್ವಾಳ: ಗ್ರಾಮ ಮಟ್ಟದಲ್ಲಿ ಕೋವಿಡ್ ನಿಯಂತ್ರಣಕ್ಕೆ ಟಾಸ್ಕ್ ಫೋರ್ಸ್ ಸಮಿತಿಯೇ ಪ್ರಮುಖ ಎಂದು ಸಾಲೆತ್ತೂರು ಗ್ರಾಮದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು. ಇಲ್ಲಿನ ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್ ಸಮಿತಿಯ ಉತ್ತಮ ಕಾರ್ಯದಿಂದ ಕೊರೊನಾ ಸೊಂಕು ಪ್ರಕರಣ ನಿಯಂತ್ರಣದಲ್ಲಿದೆ ಎಂದವರು ಹೇಳಿದರು. ತಹಶಿಲ್ದಾರ್ ರಶ್ಮಿ. ಎಸ್.ಆರ್ ಮಾತನಾಡಿ ಕೋವಿಡ್ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲನೆ ಮಾಡುವುಂತೆ ಸೂಚಿಸಿದರು. ಸೋಂಕಿತರ ಮನೆಗೆ ಮೂಲ ಸೌಕರ್ಯಗಳ ನೀಡುವ ಬಗ್ಗೆ ಕ್ರಮಕೈಗೊಳ್ಳಿ ಎಂದು ಇ.ಒ.ರಾಜಣ್ಣ ತಿಳಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಹಸೈನಾರ್ ,ಉಪಾಧ್ಯಕ್ಷೆ ಅಮಿತಾ ಎಸ್.ಭಂಡಾರಿ, ತಹಶಿಲ್ದಾರ್ ರಶ್ಮಿ. ಎಸ್. ಅರ್, ತಾ.ಪಂ.ಇ.ಒ.ರಾಜಣ್ಣ, ಪಿ.ಡಿ.ಒ.ನಳಿನಿ ಬಿ.ಕಂದಾಯ ನಿರೀಕ್ಷಕ ದಿವಾಕರ, ಗ್ರಾಮ ಕರಣಿಕ ಅನಿಲ್ ಕುಮಾರ್, ಪ್ರೊಬೇಷನರಿ ಎಸ್.ಐ. ಮಂಜುನಾಥ್ , ವೈದ್ಯಾಧಿಕಾರಿ ರೋಹಿಣಿ ,ಟಾಸ್ಕ್ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.