ಬಂಟ್ವಾಳ: ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯಸ್ಮರಣೆ ಶುಕ್ರವಾರ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಜ್ಯೋತಿ ಬೆಳಗಿ ರಾಜೀವ್ ಗಾಂಧಿ ಕುರಿತು ಮಾತನಾಡಿ, ಜಗತ್ತು ಕಂಡಂತಹ ಒಬ್ಬ ಶ್ರೇಷ್ಠ ರಾಜಕಾರಣಿ ಹಾಗೂ ಯುವಜನತೆಯ ಆಶಾಕಿರಣರಾದ ವ್ಯಕ್ತಿಯನ್ನು ಕಳೆದುಕೊಂಡದ್ದು, ಭಾರತ ದೇಶಕ್ಕೆ ತುಂಬಲಾರದ ನಷ್ಟವಾಗಿದ್ದು ಅವರ ಅವಶ್ಯಕತೆ ಈ ದೇಶಕ್ಕೆ ಅನಿವಾರ್ಯವಾಗಿತ್ತು ಎಂದರು. ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ವಾಸು ಪೂಜಾರಿ, ಜನಾರ್ಧನ ಚೆಂಡ್ತಿಮಾರ್, ಗಂಗಾಧರ ಪೂಜಾರಿ, ಮಲ್ಲಿಕಾ ವಿ ಶೆಟ್ಟಿ ಅಬ್ಬಾಸ್ ಅಲಿ. ಸಂಪತ್ ಕುಮಾರ್ ಶೆಟ್ಟಿ, ವಿನ್ಸೆಂಟ್ ಪಿಂಟೋ, ಆದಂ ಕುಂಞಿ, ಸದಾಶಿವ ಬಂಗೇರ, ಮೋಹನ್ ಗೌಡ ಕಲ್ಮಂಜ, ರಿಯಾಝ್ ಹುಸೈನ್, ಮಹಾಬಲ ಬಂಗೇರ, ಜಗನ್ನಾಥ್ ತುಂಬೆ, ದಯಾನಂದ ನೇರಂಬೋಲು, ಅಮ್ಮು ಅರ್ಬಿಗುಡ್ಡೆ, ಪ್ರವೀಣ್ ಕಿಣಿ, ವೆಂಕಪ್ಪ ಪೂಜಾರಿ ಇಬ್ರಾಹಿಂ ನವಾಝ್, ಚಿಕ್ಕ ಅರ್ಬಿಗುಡ್ಡೆ ಉಪಸ್ಥಿತರಿದ್ದರು.