ಬಂಟ್ವಾಳ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಪ್ರಯುಕ್ತ ಶುಕ್ರವಾರ ಬಂಟ್ವಾಳ ಸರ್ಕಾರಿ ಆಸ್ಪತ್ರೆ ಕೋವಿಡ್ ರೋಗಿಗಳಿಗೆ ಕಾಂಗ್ರೆಸ್ ವತಿಯಿಂದ ಹಣ್ಣುಹಂಪಲು ವಿತರಿಸಲಾಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪುಷ್ಪಲತಾ ಅವರಿಗೆ ಆಸ್ಪತ್ರೆಯಲ್ಲಿರುವ 28 ಕೊರೊನಾ ಸೋಂಕಿತರಿಗೆ ಒದಗಿಸಲು ಹಣ್ಣುಹಂಪಲು ನೀಡಿದರು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಅಬ್ಬಾಸ್ ಆಲಿ, ಗಂಗಾಧರ್ ಪೂಜಾರಿ, ರಿಯಾಝ್ ಹುಸೇನ್ ಬಂಟ್ವಾಳ್, ಸದಾಶಿವ ಬಂಗೇರ, ಮೋಹನ್ ಗೌಡ ಕಲ್ಮಂಜ, ಇಬ್ರಾಹಿಂ ನವಾಝ್, ವೆಂಕಪ್ಪ ಪೂಜಾರಿ, ಸಿದ್ದಿಕ್ ಸರವು, ಅಮ್ಮು ಅರಬೀಗುಡ್ಡೆ ಉಪಸ್ಥಿತರಿದ್ದರು.