ದ.ಕ. ಜಿಲ್ಲೆಯಲ್ಲಿ ಕೋವಿಡ್-19 ಕೊರೊನಾ ವೈರಸ್ ಸೋಂಕು ವೇಗವಾಗಿ ಹರಡುತ್ತಿರುವ ಕಾರಣ ರಾಜ್ಯ ಸರ್ಕಾರದಿಂದ 18 ವರ್ಷ ಮೇಲ್ಪಟ್ಟ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಕೋವಿಡ್-19 ಲಸಿಕೆಯನ್ನು ಪಡೆಯಲು ಸೂಚಿಸಿರುವುದರಿಂದ ಜಿಲ್ಲೆಯಲ್ಲಿ ವಾಸಿಸುತ್ತಿರುವ 18 ವರ್ಷ ಮೇಲ್ಪಟ್ಟ ವಿಕಲಚೇತನರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಕೋವಿಡ್-19 ಲಸಿಕೆಯನ್ನು ಪಡೆಯಲು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಬಂಧಪಟ್ಟವರನ್ನು ಸಂಪರ್ಕಿಸಬಹುದಾಗಿದೆ.
ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ ವಿವರ ಜಯಪ್ರಕಾಶ್ (ಮಂಗಳೂರು) 9110897458, ಗಿರೀಶ್ ಕುಮಾರ್ (ಬಂಟ್ವಾಳ) 9164645616, ನವೀನ್ ಕುಮಾರ್ (ಪುತ್ತೂರು) 7760620538, ಕುಮಾರಿ ಅಕ್ಷತಾ (ಕಡಬ) 7899579773, ಚಂದ್ರಶೇಖರ ಬಿ. (ಸುಳ್ಯ) 8105300057, ಜೋನ್ (ಬೆಳ್ತಂಗಡಿ) 9480281513 ತಾಲೂಕು ಪಂಚಾಯತ್ ನೋಡಲ್ ಅಧಿಕಾರಿಗಳಾದ ಸುಧಾ ಕೆ. (ಮಂಗಳೂರು ನಗರ) 8618396346, ಜಯಶ್ರೀ ಎಸ್. ಪವರ್ (ಮಂಗಳೂರು ಗ್ರಾಮಾಂತರ)-9480068794, ಉಷಾ ಡಿ. ವಿಟ್ಲ -8088225502, ಶೀಲಾವತಿ ಬಂಟ್ವಾಳ -9008020725, ಭಾರತಿ ಜೆ.ಎ. ಪುತ್ತೂರು -9606297837, ಶೈಲಜ ಸುಳ್ಯ -9481761016, ರತ್ನಾವತಿ ಬೆಳ್ತಂಗಡಿ -9845661677 ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಮಂಗಳೂರು ಇಲ್ಲಿಯ ಸಂಯೋಜಕರು ರೇವತಿ-6362929402, ಆಪ್ತ ಸಮಾಲೋಚಕರು ರಂಜಿನಿ -9481126784, ಮಹಿಮಾ-8296553142, ಉಷಾ ಕುಮಾರಿ -9900384153 ನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ದೂ ಸಂ.0824-2421190, 2443990 ಮತ್ತು 1090, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಯವರ ಕಛೇರಿ ದೂ ಸಂ.08242458173 ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಕೋವಿಡ್-19 ಲಸಿಕೆಯನ್ನು ಪಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಡುಗಡೆಗೊಳಿಸಿರುವ ವೆಬ್ ಸೈಟ್ ನಲ್ಲಿ ತಮ್ಮ ವಿವರವನ್ನು ನೊಂದಾಯಿಸಿಕೊಳ್ಳುವಂತೆ ಜಿಲ್ಲಾ ವಿಕಲಚೇತನರ ಹಾಗೂ ನಾಗರಿಕರ ಸಬಲೀಕರಣ ಇಲಾಖೆಯ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.