ಬಂಟ್ವಾಳ

ವಾಮದಪದವಿನಲ್ಲೂ ಆಕ್ಸಿಜನ್ ಘಟಕ ನಿರ್ಮಾಣಕ್ಕೆ ಚಿಂತನೆ: ವಾರ್ ರೂಮ್ ಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್

1 / 6

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ವಾರ್ ರೂಮ್ ಸಭೆ ಶಾಸಕರ ಕಚೇರಿಯಲ್ಲಿ ಮಂಗಳವಾರ ನಡೆಯಿತು. ಬಂಟ್ವಾಳ ಸರಕಾರಿ ಆಸ್ಪತ್ರೆಯ ಲ್ಲಿ ಶೀಘ್ರದಲ್ಲೇ ಆಕ್ಸಿಜನ್ ತಯಾರಿಕ ಘಟಕ ಅನುಷ್ಠಾನಗೊಳ್ಳಲಿದ್ದು ಇದರ ಜೊತೆಗೆ ವಾಮದಪದವು ಸಮುದಾಯ ಆರೋಗ್ಯ ಕೇಂದ್ರ ದಲ್ಲೂ ಆಕ್ಸಿಜನ್ ಘಟಕ ನಿರ್ಮಾಣ ಕ್ಕೆ ತೀರ್ಮಾನಿಸಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು  ಈ ಸಂದರ್ಭ ಹೇಳಿದರು.

ಈಗಾಗಲೇ ವಾಮದಪದವು ಆಕ್ಸಿಜನ್ ಘಟಕಕ್ಕೆ ದಾನಿಯೊಬ್ಬರು ಮುಂದೆ ಬಂದಿದ್ದು ಅದಕ್ಕೆ ಅಗತ್ಯ ವಾಗಿ ಬೇಕಿರುವ ಕಟ್ಟಡ ನಿರ್ಮಾಣ ವೊಂದನ್ನು ಶೀಘ್ರವಾಗಿ ಮಾಡಿ ಕೊಡಲಾಗುತ್ತದೆ. ಅದರ ಅನುಮತಿಗಾಗಿ ಜಿಲ್ಲಾಧಿಕಾರಿ ಒಪ್ಪಿಗೆ ಪಡೆದು ತಹಶೀಲ್ದಾರ್ ಗೆ ಸೂಚಿಸುವುದಾಗಿ ತಿಳಿಸಿದರು. ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿರುವ ಹೆಚ್ಚುವರಿ ವೆಂಟಿಲೇಟರ್ ಗಳನ್ನು ವೆನ್ಲಾಕ್ ಆಸ್ಪತ್ರೆಗೆ ನೀಡಲಾಗಿದ್ದು ಬಂಟ್ವಾಳ ದ ರೋಗಿಗಳಿಗೆ ಆದ್ಯತೆ ನೆಲೆ ಯಲ್ಲಿ ಅಲ್ಲೇ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದವರು ಹೇಳಿದರು.

ಕೋವಿಡ್ ಗೆ ಸಂಬಂಧಿಸಿದ ರೋಗಿಗಳ ಹೆರಿಗೆ ಸಹಿತ ಹಲವು ಸಮಸ್ಯೆಗಳಿಗೆ ವಾರ್ ರೂಮ್ ಮೂಲಕ ಪರಿಹಾರ ದೊರಕಿದೆ. ಬಂಟ್ವಾಳ ಮಾತ್ರವಲ್ಲ, ಕ್ಷೇತ್ರದ ಹೊರಗಿನವರ ಕುರಿತ ದೂರು ದುಮ್ಮಾನಗಳು ಬಂದರೂ ಅದನ್ನು ಸ್ವೀಕರಿಸಬೇಕು ಎಂದು ಶಾಸಕರು ಹೇಳಿದರು.

ಒಟ್ಟು 33 ಗ್ರಾಮ ಪಂಚಾಯತ್ ಗಳಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಲಾಗಿದ್ದು ಉಳಿದ 6 ಪಂಚಾಯತ್ ಗಳ ಸಭೆ ಶೀಘ್ರವಾಗಿ ಮುಗಿಸಲಿದ್ದೇವೆ ಎಂದರು. 10 ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರಯಲಾಗಿದೆ. 238 ಬೆಡ್ ಸೌಕರ್ಯಗಳಿವೆ.ಅಗತ್ಯ ಬಿದ್ದರೆ ಅಳಿಕೆ  ಸತ್ಯ ಸಾಯಿ ವಿದ್ಯಾಸಂಸ್ಥೆ ಯವರು 70 ಬೆಡ್ ವ್ಯವಸ್ಥೆ ಇರುವ ಕೇರ್ ಸೆಂಟರ್ ತೆರೆಯಲು ಸಿದ್ದರಿದ್ದಾರೆ. ಕೋವಿಡ್ ಸೊಂಕಿತರು ಸಾವನ್ನಪ್ಪಿದರೆ ಅವರ ಅಂತ್ಯಸಂಸ್ಕಾರದ ವೆಚ್ಚವನ್ನು ಶಾಸಕರ ವಾರ್ ರೂಂ ನಿಂದ  ಭರಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅವರು ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಇನ್ನೂ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು. ಪಕ್ಷದ ಜವಬ್ದಾರಿ ಎನ್ನುವುದಕ್ಕಿಂತಲೂ ಸೇವೆ ಎಂಬ ದೃಷ್ಟಿಯಿಂದ ಕೆಲಸ ಮಾಡಿ ಎಂದು ಅವರು ಹೇಳಿದರು.

ಸಭೆಯಲ್ಲಿ ಬೂಡ ಅಧ್ಯಕ್ಷ  ದೇವದಾಸ್ ಶೆಟ್ಟಿ ಅವರು ವಾರದ ಸಂಪೂರ್ಣ ವರದಿ ನೀಡಿದರು. 31 ಸದಸ್ಯರ ತಂಡದ ಶಾಸಕರ ಸಹಾಯವಾಣಿಯಲ್ಲಿ 1664 ಕರೆಗಳು ಬಂದಿವೆ. ಸರಾಸರಿ 75 ಕರೆಗಳು ಬಂದಿವೆ. ಆಸ್ಪತ್ರೆ ದಾಖಲಾತಿ 51, ಔಷಧ ವಿತರಣೆ 23 ಕುಟುಂಬಗಳಿಗೆ, 93 ಅಗತ್ಯವುಳ್ಳವರಿಗೆ 24 ಗ್ರಾಮಗಳಲ್ಲಿ ಕಿಟ್, ಒಟ್ಟು 14 ಅಂತ್ಯಸಂಸ್ಕಾರ, 17 ಮಂದಿಗೆ ವಾಹನ ವ್ಯವಸ್ಥೆ, 33 ಗ್ರಾಮಗಳಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆದಿದೆ. ಸರ್ಕಾರದ ನೀತಿನಿಯಮ ಕಟ್ಟುನಿಟ್ಟಿನ ಪಾಲನೆ ಆಗುತ್ತದೆ. ಆರು ಆಸ್ಪತ್ರೆಗಳಲ್ಲಿ 147 ಬೆಡ್ ವ್ಯವಸ್ಥೆ ಇದೆ. ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ತುಂಬಿರುತ್ತದೆ. ಬಂಟ್ವಾಳದಲ್ಲಿ 10 ಕೋವಿಡ್ ಕೇರ್ ಸೆಂಟರ್ ಇವೆ. 380 ಬೆಡ್ ಇವೆ ಎಂದು ದೇವದಾಸ ಶೆಟ್ಟಿ ಹೇಳಿದರು.ಆಸ್ಪತ್ರೆಯಲ್ಲಿ ಈವರೆಗೆ 51 ಮಂದಿಯನ್ನು ಸಹಾಯವಾಣಿ ಮೂಲಕ ಸೇರಿಸಲಾಗಿದೆ ಎಂದು ದೇವದಾಸ ಶೆಟ್ಟಿ ಹೇಳಿದರು. ವಾರ್ ರೂಮ್ ಸದಸ್ಯರಾದ ರವೀಶ್ ಶೆಟ್ಟಿ, ಮನೋಜ್ ಕೋಟ್ಯಾನ್, ಸುದರ್ಶನ ಬಜ, ಯಶೋಧರ ಕರ್ಬೆಟ್ಟು, ಪುರುಷೋತ್ತಮ ಶೆಟ್ಟಿ, ಪ್ರದೀಪ್ ಅಜ್ಜಿಬೆಟ್ಟು, ಕೇಶವ ದೈಪಲ, ದಿನೇಶ್ ದಂಬೆದಾರು, ದಿನೇಶ್ ಅಮ್ಟೂರು, ಪ್ರಕಾಶ್ ಅಂಚನ್, ಪ್ರಭಾಕರ ಪ್ರಭು, ರಮನಾಥ ರಾಯಿ, ಗಣೇಶ್ ರೈ ಮಾಣಿ, ರಂಜಿತ್ ಮೈರ, ಪ್ರಣಾಮ್, ರೋಷನ್ ಸಹಿತ ವಾರ್ ರೂಮ್ ನ ಸದಸ್ಯರು ವಿವಿಧ ಮಾಹಿತಿ ನೀಡಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ