ಸಮನ್ವಯತೆಯಿಂದ ಕೆಲಸ, ಲಸಿಕೆ ಕುರಿತು ಜನರಿಗೆ ಮಾಹಿತಿ, ಮನೆ ಮನೆಯ ಮಾಹಿತಿ ಸಂಗ್ರಹಕ್ಕೆ ಸೂಚನೆ
ಬಂಟ್ವಾಳ ತಾಲೂಕಿನ ಅನಂತಾಡಿ, ಬೋಳಂತೂರು, ಮಂಚಿ, ಸಜಿಪಮುನ್ನೂರು, ಸಜಿಪಮೂಡ ಗ್ರಾಮಗಳಲ್ಲಿ ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ (ಕಾರ್ಯಪಡೆ) ಸಭೆ ಸೋಮವಾರ ನಡೆಯಿತು. ಈ ಸಂದರ್ಭ ಶಾಸಕರು ಪ್ರತಿಯೊಂದು ಪಂಚಾಯಿತಿಯ ಕೊರೊನಾ ಸೋಂಕಿತರ ವಿವರಗಳನ್ನು ಪಡೆದು, ಜಾಗರೂಕರಾಗಿ ಸಮನ್ವಯತೆಯಿಂದ ಕೆಲಸ ಮಾಡಬೇಕು, ಲಸಿಕೆಯ ಕುರಿತು ಸರಿಯಾದ ಮಾಹಿತಿಯನ್ನು ಜನರಿಗೆ ನೀಡುವ ಕೆಲಸವನ್ನು ಮಾಡಬೇಕು. ಕೊರೊನಾ ಮುಕ್ತವನ್ನಾಗಿಸಲು ಅಗತ್ಯವಿರುವ ಕಾರ್ಯಯೋಜನೆಯನ್ನು ಗ್ರಾಮಮಟ್ಟದಲ್ಲೇ ರೂಪಿಸಿ, ಸಕ್ರಿಯವಾಗಿ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಹಸೀಲ್ದಾರ್ ರಶ್ಮಿ ಎಸ್.ಆರ್ ಅವರು ಕಾರ್ಯಪಡೆಯ ಕಾರ್ಯವೈಖರಿ ಹಾಗೂ ಕೊರೊನಾ ಸಂಬಂಧಿಸಿ ಸರ್ಕಾರದ ಮಾರ್ಗಸೂಚಿ, ರೇಷನ್ ಮತ್ತಿತರ ವಿತರಣೆ, ಲಸಿಕೆಯ ಲಭ್ಯತೆಯ ಕುರಿತು ಮಾಹಿತಿ ನೀಡಿ, ಯಾವುದೇ ಸಮಸ್ಯೆ ಕಂಡುಬಂದಲ್ಲಿ ತತ್ ಕ್ಷಣ ಪರಿಹರಿಸಲು ಉಪಕ್ರಮಿಸಬೇಕು ಎಂದು ತಿಳಿಸಿದರು. ಬಂಟ್ವಾಳನ್ಯೂಸ್ www.bantwalnews.com ವರದಿ ಇಲ್ಲಿದೆ.
ಸಜಿಪಮೂಡದಲ್ಲಿ ಗ್ರಾ.ಪ.ಅದ್ಯಕ್ಷೆ ಹರಿಣಾಕ್ಷಿ, ಉಪಾಧ್ಯಕ್ಷ ಸಿದ್ದೀಕ್, ವೈದ್ಯಾಧಿಕಾರಿ ಡಾ. ತುಫೈಲ್, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಅಕ್ಷತಾ, ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮ ಕರಣಿಕೆ ಸ್ವಾತಿ,ಶಾಸಕರ ವಾರ್ ರೂಂ ಪ್ರಮುಖರಾದ ದೇವದಾಸ್ ಶೆಟ್ಟಿ, ದೇವಪ್ಪ ಪೂಜಾರಿ, ಶ್ರೀಕಾಂತ್ ಶೆಟ್ಟಿ ಸಂಕೇಶ, ಪುರುಷೋತ್ತಮ ಶೆಟ್ಟಿ ವಾಮದಪದವು, ಯಶವಂತ ಸಜೀಪ,ಸುರೇಶ್ ಪೂಜಾರಿ ಗ್ರಾಪಂ ಸದಸ್ಯರು, ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಇದ್ದರು.
ಸಜಿಪಮುನ್ನೂರಿನಲ್ಲಿ ನಂದಾವರ ಪ್ರದೇಶದಲ್ಲಿ ರೇಷನ್ ವಿತರಣೆಯ ಸಮಸ್ಯೆ ಕುರಿತು ಪರಿಶೀಲಿಸುವುದಾಗಿ ತಹಸೀಲ್ದಾರ್ ಹೇಳಿದರು., ಫ್ಲೈಯಿಂಗ್ ಸ್ವ್ಕಾಡ್ ಅಧಿಕಾರಿ ಅಕ್ಷತಾ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ವೈಧ್ಯಾಧಿಕಾರಿ ಡಾ.ತುಫೈಲ್, ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ, ಗ್ರಾ.ಪಂ.ಅಧ್ಯಕ್ಷೆ ಪೌವಸ್ತೀನ್ ಡಿಸೋಜ, ಉಪಾಧ್ಯಕ್ಷೆ ಸಬೀನಾ, ಅಭಿವೃದ್ಧಿ ಅಧಿಕಾರಿ ಮೊಹಮ್ಮದ್, ಗ್ರಾಮ ಕರಣಿಕೆ ಸ್ವಾತಿ, ಶಾಸಕರ ವಾರ್ ರೂಂ ಪ್ರಮುಖರಾದ ದೇವದಾಸ್ ಶೆಟ್ಟಿ, ದೇವಪ್ಪ ಪೂಜಾರಿ, ಪುರುಷೋತ್ತಮ ಶೆಟ್ಟಿ, ಗ್ರಾ.ಪಂ.ಸದಸ್ಯರು, ಟಾಸ್ಕ್ ಫೋರ್ಸ್ ಸದಸ್ಯರು ಉಪಸ್ಥಿತರಿದ್ದರು.
ಮಂಚಿ ಗ್ರಾಮದಲ್ಲಿ ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪ ಎಸ್.ಕಾಮತ್, ಉಪಾಧ್ಯಕ್ಷ ಪಿ.ಮೋಹನದಾಸ ಶೆಟ್ಟಿ, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಅಕ್ಷತಾ, ಪಿ.ಡಿ.ಒ.ಮಯಾಕುಮಾರಿ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮ ಕರಣಿಕೆ ಅಶ್ವಿನಿ , ಶಾಸಕರ ವಾರ್ ರೂಂ ಪ್ರಮುಖರಾದ ದೇವಪ್ಪ ಪೂಜಾರಿ, ಪುರುಷೋತ್ತಮ ಶೆಟ್ಟಿ ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಬೋಳಂತೂರು ಗ್ರಾಮದಲ್ಲಿ ಬೋಳಂತೂರು ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ, ಉಪಾಧ್ಯಕ್ಷೆ ಮಹಾಲಕ್ಷ್ಮೀ, ಅಭಿವೃದ್ಧಿ ಅಧಿಕಾರಿ ಪುಷ್ಪಾ ಎಂ, ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ, ಗ್ರಾಮಕರಣಿಕ ಕರಿಬಸಪ್ಪ, ಶಾಸಕರ ವಾರ್ ರೂಂ ಪ್ರಮುಖರಾದ ದೇವದಾಸ್ ಶೆಟ್ಟಿ, ದೇವಪ್ಪ ಪೂಜಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಗ್ರಾ.ಪಂ.ಸದಸ್ಯರು, ಟಾಸ್ಕ್ ಫೋರ್ಸ್ ಸಮಿತಿ ಉಪಸ್ಥಿತರಿದ್ದರು.
ಅನಂತಾಡಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಪೂಜಾರಿ ಬಂಟ್ರಿಂಜ, ಉಪಾಧ್ಯಕ್ಷ ಕುಸುಮಾಧರ ಗೌಡ, ಪಿ.ಡಿ.ಒ.ಜಯರಾಮ ಕೆ, ಕಂದಾಯ ನಿರೀಕ್ಷಕ ದಿವಾಕರ ಮುಗುಳ್ಯ, ಗ್ರಾಮ ಕರಣಿಕ ಮಂಜುನಾಥ ಎಚ್, ಕೆ, ಶಾಸಕರ ವಾರ್ ರೂಂ.ಪ್ರಮುಖರಾದ ದೇವದಾಸ ಶೆಟ್ಟಿ, ದೇವಪ್ಪ ಪೂಜಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರುಗಳು ಮತ್ತು ಅಧಿಕಾರಿಗಳು ಹಾಜರಿದ್ದರು.