ಬಂಟ್ವಾಳ: ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ನ ವಿವಿಧ ಘಟಕಗಳ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಭಾಗಿತ್ವದಲ್ಲಿ ಭಾನುವಾರ ಬಿ.ಸಿ.ರೋಡಿನ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಕೊರೊನಾ ಸನ್ನಿವೇಶದಲ್ಲಿ ಬಡವರಿಗೆ, ನಿರ್ಗತಿಕರಿಗೆ ತೊಂದರೆಯಾಗದಂತೆ ಪಕ್ಷವು ಸ್ಥಳೀಯ ಮಟ್ಟದಲ್ಲೇ ಸಕ್ರಿಯವಾಗಿದೆ. ಆಕ್ಸಿಜನ್ ಇರುವ ಆಂಬುಲೆನ್ಸ್ ಸೇವೆಯನ್ನು ನೀಡುತ್ತಿದೆ ಎಂದ ರೈ, ರಕ್ತದಾನ ಶಿಬಿರದಲ್ಲಿ 150ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ಇದು ರಕ್ತದ ಅವಶ್ಯಕತೆ ಇರುವವರಿಗೆ ಸಹಾಯವಾಗುತ್ತದೆ ಎಂದರು.
ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಪಕ್ಷ ಪ್ರಮುಖರಾದ ಪದ್ಮನಾಭ ರೈ, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, ಅಬ್ಬಾಸ್ ಆಲಿ, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಮೋಹನ ಗೌಡ ಕಲ್ಮಂಜ, ಪ್ರಶಾಂತ್ ಕುಲಾಲ್, ಉಮ್ಮರ್ ಕುಂಞ ಸಾಲೆತ್ತೂರು, ಇಬ್ರಾಹಿಂ ನವಾಜ್ ಬಡಕಬೈಲ್. ವಿನಯ್ ಕುಮಾರ್ ಸಿಂಧ್ಯ ಸಹಿತ ಬ್ಲಾಕ್ ಕಾಂಗ್ರೆಸ್ ನ ವಿವಿಧ ಪದಾಧಿಕಾರಿಗಳು, ಪುರಸಭೆ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…