ಬಂಟ್ವಾಳ: ಕಳೆದ ರಾತ್ರಿಯಿಂದೀಚೆಗೆ ನಿರಂತರವಾಗಿ ಬಂಟ್ವಾಳ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಬೆಳಗ್ಗೆ ಸ್ವಲ್ಪ ಹೊತ್ತು ತೀವ್ರತೆ ಕಡಿಮೆಯಾದರೂ ಸುಮಾರು 10 ಗಂಟೆ ಬಳಿಕ ಮತ್ತೆ ವೇಗ ಪಡೆಯಿತು. ಕೆಲವೆಡೆ ವಿದ್ಯುತ್ ಪೂರೈಕೆಯೂ ಅಸ್ತವ್ಯಸ್ತಗೊಂಡಿತು. ರಸ್ತೆ ಕಾಮಗಾರಿ ನಡೆಯುತ್ತಿರುವ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗ ಮಳೆಯಿಂದಾಗಿ ಹೊಂಡಗಳೆಲ್ಲ ತುಂಬಿತು. ಇದೇ ರೀತಿ ಅರ್ಧದಲ್ಲಿರುವ ಕಾಮಗಾರಿಗಳಿಗೆ ಮಳೆ ಅಡ್ಡಿಯುಂಟು ಮಾಡಿದೆ. ಚಂಡಮಾರುತ ಹಿನ್ನೆಲೆಯಲ್ಲಿ ಮಳೆಯಾಗುತ್ತಿದ್ದು, ಇದುವರೆಗೂ ಗಂಭೀರ ಹಾನಿಗಳುಂಟಾದ ಕುರಿತು ಯಾವುದೇ ವರದಿಯಾಗಿಲ್ಲ.