ನ್ಯಾಯಬೆಲೆ ಅಂಗಡಿಯಲ್ಲಿ ಮೇ ತಿಂಗಳಿಗೆ ಏನು ದೊರಕುತ್ತದೆ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಗಳು ತಿಂಗಳ ಕೊನೆಯ ದಿನಾಂಕದವರೆಗೂ ಪ್ರತಿದಿನ ಪಡಿತರ ವಿತರಣೆ ಮಾಡಲು ಕಡ್ಡಾಯವಾಗಿ ತೆರೆದಿರುತ್ತವೆ. ತಿಂಗಳ ಕೊನೆಯವರೆಗೂ ಪಡಿತರ ವಿತರಣೆ ಮಾಡುವುದರಿಂದ ಪಡಿತರ ಚೀಟಿದಾರರು ಆತಂಕ ಪಡದೇ, ಪಡಿತರ ಪಡೆಯಬಹುದಾಗಿರುತ್ತದೆ. ಬೆಳಗ್ಗೆ 7 ಗಂಟೆಯಿಂದ 10 ಗಂಟೆಯ ಸಮಯದಲ್ಲಿ ಪ್ರತಿದಿನ ಪಡಿತರ ಚೀಟಿದಾರರು ಪಡಿತರ ಪಡೆಯುತ್ತಿರುವ ಈ ಸಂದರ್ಭ ಸಾಮಾಜಿಕ ಅಂತರಕಾಯ್ದು ಮತ್ತು ಜನದಟ್ಟಣೆ ನಿಯಂತ್ರಣಕ್ಕಾಗಿ ಮೊದಲು ಬರುವ ಸರಾಸರಿ 100-150 ಪಡಿತರ ಚೀಟಿದಾರರಿಗೆ ಆದ್ಯತೆ ಮೇರೆಗೆ ಸಾಲಿನಲ್ಲಿ ನಿಲ್ಲಲು ಕ್ಯೂ ಸ್ಲಿಪ್ ಟೋಕನ್ ಗಳನ್ನು ನೀಡಲು ನ್ಯಾಯಬೆಲೆ ಅಂಗಡಿಗಳಿಗೆ ಸೂಚಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ 2021 ರ ಮೇ ಮಾಹೆಗೆ 5825.665 ಎಂ.ಟಿ. ಅಕ್ಕಿ, 5608.645 ಎಂ.ಟಿ ಅಕ್ಕಿ, 501.696 ಎಂ.ಟಿ.ಗೋಧಿ ಹಾಗೂ 170 ಎಂ.ಟಿ ಆದ್ಯತೇತರ ಪಡಿತರ ಚೀಟಿ ಅಕ್ಕಿಯು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಬಿಡುಗಡೆಯಾಗಿರುತ್ತದೆ. ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ 5 ಕೆ.ಜಿ ಹೆಚ್ಚುವರಿ ಅಕ್ಕಿಯನ್ನು ಪಡಿತರ ಚೀಟಿಯ ಪ್ರತಿ ಸದಸ್ಯರು ಪಡೆಯುತ್ತಾರೆ.
ಈ ಕೆಳಕಂಡ ಪ್ರಮಾಣದಲ್ಲಿ ಒಟ್ಟು ಪಡಿತರವನ್ನು ಪಡೆಯಬಹುದಾಗಿರುತ್ತದೆ.: ಅಂತ್ಯೋದಯ ಪಡಿತರ ಚೀಟಿಗೆ: ಉಚಿತ-35 ಕೆ.ಜಿ ಅಕ್ಕಿ ಜೊತೆಗೆ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ವಿತರಿಸಲಾಗುವುದು. ಆದ್ಯತಾ (ಬಿ.ಪಿ.ಎಲ್) ಪಡಿತರಚೀಟಿಗೆ: ಉಚಿತ–ಪ್ರತಿ ಸದಸ್ಯನಿಗೆ 10 ಕೆ.ಜಿಅಕ್ಕಿ ಜೊತೆಗೆ ಪ್ರತಿಕಾರ್ಡಿಗೆ 2 ಕೆ.ಜಿಗೋಧಿ ವಿತರಿಸಲಾವುದು. ಆದ್ಯತೇತರ (ಎ.ಪಿ.ಎಲ್) ಪಡಿತರ ಚೀಟಿಗೆ ಕೆ.ಜಿ.ಗೆ ರೂ.15 ರದರದಲ್ಲಿ ಏಕ ಸದಸ್ಯನಿಗೆ 5 ಕೆ.ಜಿ ಹಾಗೂ ಬಹುಸದಸ್ಯ ಪಡಿತರ ಚೀಟಿಗೆ 10ಕೆ.ಜಿ ಪಡಿತರ ಅಕ್ಕಿ ವಿತರಿಸಲಾಗುವುದು ಎಂದು ಆಹಾರ ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.