ನಾವೂರು, ನರಿಕೊಂಬು, ಗೋಳ್ತಮಜಲು, ಬಾಳ್ತಿಲ, ವೀರಕಂಭ, ಮಾಣಿ ಮತ್ತು ಪೆರಾಜೆ ಗ್ರಾಮ ಪಂಚಾಯಿತಿಗಳಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಗುರುವಾರ ಟಾಸ್ಕ್ ಫೋರ್ಸ್ ಸಭೆ ನಡೆಸಿ, ಕೊರೊನಾ ಹಿನ್ನೆಲೆಯಲ್ಲಿ ಪಂಚಾಯಿತಿ ಕೈಗೊಂಡ ಕೆಲಸ ಕಾರ್ಯಗಳನ್ನು ಪರಿಶೀಲಿಸಿದರು. ಈ ಸಂದರ್ಭ ಕಾರ್ಯಪಡೆ ಸದಸ್ಯರಿಂದ ಗ್ರಾಮವಾರು ಮಾಹಿತಿ ಪಡೆದುಕೊಂಡ ಶಾಸಕರು, ಲಸಿಕೆ ಹಾಕುವ ವಿಚಾರ ಸಹಿತ ಲಾಕ್ ಡೌನ್ ಕಟ್ಟುನಿಟ್ಟಿನ ಪಾಲನೆಯ ಮಾರ್ಗಸೂಚಿಯನ್ನು ನಿಷ್ಠುರವಾಗಿ ಪಾಲಿಸುವಂತೆ ಸೂಚಿಸಿದರು. ಅವುಗಳ ವಿವರ ಇಲ್ಲಿದೆ.
ನಾವೂರು 94 ಸಕ್ರಿಯ ಪ್ರಕರಣ: ಬಂಟ್ವಾಳ: ಬಂಟ್ವಾಳ ತಾಲೂಕಿನ ನಾವೂರು ಗ್ರಾಪಂ ವ್ಯಾಪ್ತಿಯಲ್ಲಿ 101 ಕೋವಿಡ್ ಸೋಂಕಿತರು ಇದ್ದು, 7 ಮಂದಿ ಗುಣಮುಖರಾಗಿದ್ದಾರೆ. 94 ಸಕ್ರಿಯ ಪ್ರಕರಣಗಳಿದ್ದು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಶಾಸಕ ರಾಜೇಶ್ ನಾಯ್ಕ್ ಸೂಚಿಸಿದರು. ಗ್ರಾ.ಪಂ.ಅಧ್ಯಕ್ಷರಾದ ಉಮೇಶ್ ಕುಲಾಲ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿಲ್ಮಾ, ತಹಶಿಲ್ದಾರ್ ರಶ್ಮಿ ಎಸ್ ಆರ್, ತಾ.ಪಂ.ಇ.ಒ ರಾಜಣ್ಣ, ಗ್ರಾ.ಪಂ. ಪಿ.ಡಿ.ಒ. ರಚನ್ ಕುಮಾರ್,ಸಿಡಿಪಿಓ ಗಾಯತ್ರಿ ಕಂಬಳಿ,ಕಂದಾಯ ವೃತ್ತ ನಿರೀಕ್ಷಕ ನವೀನ್ ಕುಮಾರ್,ಗ್ರಾಮ ಕರಣೀಕ ಕುಮಾರ್ ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ನರಿಕೊಂಬು 26 ಸಕ್ರಿಯ ಪ್ರಕರಣ: ಬಂಟ್ವಾಳ: ನರಿಕೊಂಬು ಗ್ರಾಮದಲ್ಲಿ ಕೋವಿಡ್ ಒಟ್ಟು 59 ಪ್ರಕರಣಗಳು ವರದಿಯಾಗಿದ್ದು, 26 ಆಕ್ಟೀವ್ ಕೇಸ್ ಗಳಿವೆ. 21 ಮಂದಿ ಹೋಂ ಐಸೋಲೇಶನ್ ನಲ್ಲಿದ್ದಾರೆ. ತಹಶೀಲ್ದಾರ್ ರಶ್ಮಿ ಎಸ್.ಆರ್. ತಾಪಂ ಇಒ ರಾಜಣ್ಣ, ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪುರುಷೋತ್ತಮ, ಉಪಾಧ್ಯಕ್ಷ ಪ್ರಕಾಶ್ ಮಡಿಮುಗೆರು, ಸಿ.ಡಿ.ಪಿ.ಒ ಗಾಯತ್ರಿ ಕಂಬಳಿ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪಿ.ಡಿ.ಒ.ಶಿವಪ್ಪ ಜನಗೊಂಡ, ಗ್ರಾಮ ಕರಣಿಕ ಅತೀಕ್ ಪೂಜಾರಿ, ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಗೋಳ್ತಮಜಲು 25 ಸಕ್ರಿಯ ಪ್ರಕರಣ: ಗೋಳ್ತಮಜಲು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪತ್ತೆಯಾಗಿರುವ 59 ಒಟ್ಟು ಪ್ರಕರಣಗಳ ಪೈಕಿ 25 ಸಕ್ರೀಯ ಪ್ರಕರಣಗಳಿದ್ದು ಎಲ್ಲರೂ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕೋವಿಡ್ ಕರ್ತವ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆಯರ ಸಂಚಾರಕ್ಕೆ ಅನುಕೂಲವಾಗುವಂತೆ ವಾಹನ ವ್ಯವಸ್ಥೆಯನ್ನು ಪಂಚಾಯಿತಿ ಕಲ್ಪಿಸಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಅವರು ಗೋಳ್ತಮಜಲು ಕಾರ್ಯಪಡೆ ಸಭೆಯಲ್ಲಿ ಸೂಚಿಸಿದರು. ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್ ಆರ್ ಮಾತನಾಡಿ, ಪ್ರಸ್ತುತ ಲಸಿಕೆ ಅಲಭ್ಯತೆಗೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದರು. ತಾ.ಪಂ.ಇ.ಒ.ರಾಜಣ್ಣ ಮಾತನಾಡಿ, ಹೊರಜಿಲ್ಲೆ, ಹೊರ ರಾಜ್ಯದಿಂದ ಬಂದವರ ಬಗ್ಗೆ ನಿಗಾವಹಿಸಲು ಸೂಚಿಸಿದರು. ಗೋಳ್ತಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಅಭಿಷೇಕ್ ಎನ್, ಉಪಾಧ್ಯಕ್ಷೆ ಲಕ್ಮೀ ವಿ.ಪ್ರಭು, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ, ಕಂದಾಯನಿರೀಕ್ಷಕ ರಾಮ ಕಾಟಿಪಳ್ಳ, ಪಿ.ಡಿ.ಒ.ವಿಜಯಶಂಕರ್ ಆಳ್ವ, ಗ್ರಾಮ ಕರಣಿಕ ಜನಾರ್ಧನ, ಶಾಸಕರ ವಾರ್ ರೂಮ್ ಪ್ರಮುಖರಾದ ದೇವಪ್ಪ ಪೂಜಾರಿ, ವಜ್ರನಾಥ ಕಲ್ಲಡ್ಕ, ರಮನಾಥ ರಾಯಿ, ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ವೀರಕಂಭದಲ್ಲಿ 32 ಸಕ್ರಿಯ ಪ್ರಕರಣ: ವೀರಕಂಭ ಗ್ರಾಮದಲ್ಲಿ 32 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, ಎಚ್ಚರಿಕೆ ವಹಿಸುವಂತೆ ವೀರಕಂಭದಲ್ಲಿ ನಡೆದ ಕಾರ್ಯಪಡೆ ಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದಾರೆ. ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್ ಆರ್, ತಾ.ಪಂ.ಇ.ಒ.ರಾಜಣ್ಣ, ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷೆ ಶೀಲಾ ನಿರ್ಮಲಾ ವೇಗಸ್, ತಾ.ಪಂ. ನಿಕಟಪೂರ್ವ ಸದಸ್ಯೆ ಗೀತಾ ಚಂದ್ರಶೇಖರ್, ಪಿ.ಡಿ.ಒ. ಗಿರಿಜಾ ಪಿ. ಗ್ರಾಮ ಕರಣಿಕ ಕರಿಬಸಪ್ಪ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಶಾಸಕರ ವಾರ್ ರೂಂ ಪ್ರಮುಖರಾದ ಬುಡ ಅಧ್ಯಕ್ಷ ದೇವದಾಸ್ ಶೆಟ್ಟಿ, ದೇವಪ್ಪ ಪೂಜಾರಿ, ಆನಂದ ಶಂಭೂರು, ಯಶವಂತ ನಾಯ್ಕ್, ದೇವಿಪ್ರಸಾದ್ ಶೆಟ್ಟಿ ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಳ್ತಿಲ 7 ಸಕ್ರಿಯ ಪ್ರಕರಣ: ಬಂಟ್ವಾಳ: ಬಾಳ್ತಿಲ ಗ್ರಾಮ ಪಂಚಾಯತಿಯಲ್ಲಿ ಒಟ್ಟು 7 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಕೊರೊನಾಕ್ಕೆ ಸಂಬಂಧಿಸಿ ಟಾಸ್ಕ್ ಫೋರ್ಸ್ ಕೆಲಸ ತೃಪ್ತಿಕರವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು. ಲಸಿಕೆ ಕುರಿತು ಸಂಶಯಗಳನ್ನು, ತಪ್ಪು ಮಾಹಿತಿ ಹರಡಲಾಗುತ್ತಿದೆ, ನೋಂದಣಿ ಮಾಡಿದವರೆಲ್ಲರಿಗೂ ಲಸಿಕೆ ದೊರಕುತ್ತದೆ. ಮಾಹಿತಿ ಬಂದ ಮೇಲಷ್ಟೇ ಹೋಗಿ. ಎರಡನೇ ಡೋಸ್ ಪಡೆದುಕೊಳ್ಳುವವರಿಗೆ ಪ್ರಥಮ ಆದ್ಯತೆ. ಆತಂಕ ಪಡುವ ಅಗತ್ಯ ಇಲ್ಲ. ಆಸ್ಪತ್ರೆಗೆ ಧಾವಿಸುವ ಅಗತ್ಯವಿಲ್ಲ. ಎಲ್ಲರಿಗೂ ಲಸಿಕೆ ಒದಗಿಸಲಾಗುತ್ತದೆ. ಟಾಸ್ಕ್ ಫೋರ್ಸ್ ಇದನ್ನು ಜನರಿಗೆ ವಿವರಿಸಬೇಕು ಎಂದು ತಹಸೀಲ್ದಾರ್ ರಶ್ಮಿ ಎಸ್.ಆರ್. ಹೇಳಿದರು. ಬಾಳ್ತಿಲ ಗ್ರಾ.ಪಂ.ಅಧ್ಯಕ್ಷೆ ಹಿರಣ್ಮಯಿ, ಉಪಾಧ್ಯಕ್ಷೆ ಜ್ಯೋತಿ ಎಸ್.ನಾಯಕ್ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ರಾಜಣ್ಣ, ಬಂಟ್ವಾಳ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ, ಪಂಚಾಯತ್ ಪಿ.ಡಿ.ಒ.ಸಂಧ್ಯಾ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮ ಕರಣಿಕೆ ಯಶ್ವಿತ, ಶಾಸಕರ ಟಾಸ್ಕ್ ಫೋರ್ಸ್ ಸಮಿತಿ ಪ್ರಮುಖರಾದ ದೇವಪ್ಪ ಪೂಜಾರಿ , ರಮನಾಥ ರಾಯಿ , ಯಶೋಧರ ಕರ್ಬೆಟ್ಟು, ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಪೆರಾಜೆ 2 ಸಕ್ರಿಯ ಪ್ರಕರಣ: ಪತ್ತೆಯಾದ 2 ಕೊರೋನಾ ಪ್ರಕರಣಗಳು ಗುಣಮುಖರಾಗುವ ಹಂತದಲ್ಲಿದ್ದಾರೆ, ಇದು ಉತ್ತಮ ಅಂಶ ಎಂದು ಶಾಸಕ ರಾಜೇಶ್ ನಾಯ್ಕ್ ಪೆರಾಜೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ತಹಸೀಲ್ದಾರ್ ರಶ್ಮಿ ಎಸ್.ಆರ್. ಲಸಿಕೆ ಕುರಿತು, ತಾಪಂ ಇಒ ರಾಜಣ್ಣ ಕೋವಿಡ್ ನಿಯಮಗಳ ಕುರಿತು ಮಾಹಿತಿ ನೀಡಿದರು. ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ ಮಾತನಾಡಿ, ಗ್ರಾಮಸ್ಥರಲ್ಲಿ ಕೊರೋನಾ ಗೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಂಡಲ್ಲಿ, ತಕ್ಷಣವೇ ಕೊರೋನಾ ತಪಾಸಣೆ ಮಾಡಿಕೊಳ್ಳಬೇಕು ಎಂದರು, ಪೆರಾಜೆ ಗ್ರಾ.ಪಂ.ಅಧ್ಯಕ್ಷೆ ರೋಹಿಣಿ, ಉಪಾಧ್ಯಕ್ಷ ಉಮ್ಮರ್, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪಿ.ಡಿ.ಒ.ಶಂಭುಕುಮಾರ ಶರ್ಮ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಗ್ರಾಮ ಕರಣಿಕೆ ಸುರಕ್ಷಾ, ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಶಶಿಕಲಾ, ಶಾಸಕರ ವಾರ್ ರೂಂ ಪ್ರಮುಖರಾದ ದೇವಪ್ಪ ಪೂಜಾರಿ, ಯಶವಂತ ನಾಯ್ಕ್ , ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾಣಿ: 9 ಸಕ್ರಿಯ ಪ್ರಕರಣ: ಮಾಣಿ ಗ್ರಾಪಂನಲ್ಲಿ ಒಟ್ಟು 9 ಸಕ್ರಿಯ ಪ್ರಕರಣಗಳಿದ್ದು, ಕಾರ್ಯಪಡೆಯ ಕಾರ್ಯವೈಖರಿಗೆ ಶಾಸಕ ರಾಜೇಶ್ ನಾಯ್ಕ್ ಮೆಚ್ಚುಗೆ ವ್ಯಕ್ತಪಡಿಸಿದರು.. ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್ ಆರ್, ತಾ.ಪಂ.ಇ.ಒ.ರಾಜಣ್ಣ ಮಾಹಿತಿ ನೀಡಿದರು. ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೇಸರ್, ಕೊಡೆ ವಿತರಣೆಗೆ ಪಂಚಾಯತ್ ಕ್ರಮ ಕೈಗೊಳ್ಳುವಂತೆ ಪಿಡಿಒ ಅವರಿಗೆ ಇಒ ರಾಜಣ್ಣ ಸೂಚಿಸಿದರು. ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ತಹಸೀಲ್ದಾರ್ ರಶ್ಮಿ ಎಸ್.ಆರ್, ಇಒ ರಾಜಣ್ಣ, ಪಿಡಿಒ ನಾರಾಯಣ ಗಟ್ಟಿ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲಾ, ಶಾಸಕರ ವಾರ್ ರೂಮ್ ಪ್ರಮುಖರಾದ ದೇವದಾಸ ಶೆಟ್ಟಿ, ದೇವಪ್ಪ ಪೂಜಾರಿ, ಯಶವಂತ ನಾಯ್ಕ್ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.