ಕೋವಿಡ್ ನಿಯಮ ಪಾಲನೆಯೊಂದಿಗೆ ಕಾರ್ಯಕ್ಕೆ ಸಲಹೆ
ಬೀಡಿ ಉದ್ದಿಮೆ ಪುನಾರಾರಂಭ ಮಾಡುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.
ಕೊರೋನಾ 2ನೇ ಅಲೆ ಪ್ರಯುಕ್ತ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಬೀಡಿ ಕಾರ್ಮಿಕರು ಕೆಲಸವಿಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದು, ಬೀಡಿ ಕಟ್ಟುವ ಕಾರ್ಮಿಕರು ಗೃಹ ಕಾರ್ಮಿಕರಾಗಿದ್ದು, ಯಾವುದೇ ಚಲನ ವಲನವಿಲ್ಲದೇ ಮನೆಯಲ್ಲಿಯೇ ಕೆಲಸ ನಿರ್ವಹಿಸುತ್ತಾರೆ. ಬೀಡಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಕಮಿಷನರ್ ಜೊತೆ ವಿವರವಾಗಿ ಚರ್ಚಿಸಿ, ಸಹಾಯಕ ಕಾರ್ಮಿಕ ಆಯುಕ್ತರು, ಮಂಗಳೂರು ವಿಭಾಗ ಇವರಿಗೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೀಡಿ ಉತ್ಪಾದಕರ ಸಭೆ ಕರೆದು ಬೀಡಿ ಉದ್ದಿಮೆಯನ್ನು ಪುನಾರಾರಂಭಿಸಲು ಸೂಚಿಸಿದುದರ ಫಲವಾಗಿ, ಕೋವಿಡ್ 19 ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕರ ಹೊರಡಿಸಿರುವ ಮಾರ್ಗಸೂಚಿಗಳ ಉಲ್ಲಂಘನೆಯಾದಗಂತೆ, ಎಲ್ಲಾ ನಿಯಮಗಳನ್ನು ಪಾಲಿಸಿ, ಬೀಡಿ ಉದ್ದಿಮೆಗೆ ಸಂಬಂದಪಟ್ಟ ಗುತ್ತಿಗೆದಾರರು, ಲೇಬಲ್ ಕೆಲಸಗಾರರು ಮತ್ತು ಕಚೇರಿಯ ಸಿಬ್ಬಂದಿಗಳು ಸಾಧ್ಯವಾದಷ್ಟು ಕಡಿಮೆ ಸಂಖ್ಯೆಯಲ್ಲಿ ಉದ್ದಿಮೆಗೆ ಹೋಗಿ ಬರಲು, ಕಚ್ಛಾ ವಸ್ತುಗಳನ್ನು ಮತ್ತು ಸಿದ್ದಪಡಿಸಿದ ಬೀಡಿಗಳ ಸಾಗಾಣಿಕೆಯನ್ನು ಪುನರ್ ಆರಂಭಿಸಲು, ಉಸ್ತುವಾರಿ ಸಚಿವರ ಆದೇಶದಂತೆ, ಅವಕಾಶ ನೀಡಲಾಗಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತರು, ಮಂಗಳೂರು ವಿಭಾಗ ಅವರ ಪ್ರಕಟಣೆ ತಿಳಿಸಿದೆ.