ಬಂಟ್ವಾಳ: ಹಿಂದು ಜಾಗರಣ ವೇದಿಕೆ ಆ್ಯಂಬುಲೆನ್ಸ್ ಸೇವೆ ಬಂಟ್ವಾಳದಲ್ಲಿ ಗುರುವಾರ ಲೋಕಾರ್ಪಣೆ ಗೊಂಡಿತು. ಪುತ್ತೂರು ಜಿಲ್ಲೆ ವ್ಯಾಪ್ತಿಯಲ್ಲಿ ಎರಡನೇ ಆ್ಯಂಬುಲೆನ್ಸ್ ಸೇವೆ ಇದಾಗಿದ್ದು, ಮೊದಲನೆಯದ್ದು, ಈಗಾಗಲೇ ಪುತ್ತೂರಿನಲ್ಲಿ ಸೇವೆಯಲ್ಲಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಿ.ಸಿ.ರೋಡಿನ ಸೇವಾಭಾರತಿ ಕಚೇರಿಯ ಬಳಿ ಲೋಕಾರ್ಪಣೆಗೊಳಿಸಿದರು.
ಆರ್.ಎಸ್.ಎಸ್. ಮುಂದಾಳುಗಳಾದ ದಿ.ವೆಂಕಟರಮಣ ಹೊಳ್ಳ ಹಾಗೂ ದಿ.ಶರತ್ ಮಡಿವಾಳ ಅವರ ಸ್ಮರಣಾರ್ಥ ಈ ಆಂಬುಲೆನ್ಸ್ ಒದಗಿಸಲಾಗುತ್ತಿದೆ. ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಆರ್.ಎಸ್.ಎಸ್.ಜಿಲ್ಲಾ ಕಾರ್ಯವಾಹ ವಿನೋದ್ ಕೊಡ್ಮಾಣ್, ಹಿಂಜಾವೇ ಪ್ರಮುಖರಾದ ಜಗದೀಶ್ ನೆತ್ತರಕೆರೆ, ರವಿರಾಜ್ ಬಿ.ಸಿ.ರೋಡು, ರತ್ನಾಕರ ಶೆಟ್ಟಿ, ನರಸಿಂಹ ಮಾಣಿ, ಪ್ರಶಾಂತ್ ಕೆಂಪುಗುಡ್ಡೆ, ಚಂದ್ರ ಕಲಾಯಿ, ಬಾಲಕೃಷ್ಣ ಕಲಾಯಿ, ತಿರುಲೇಶ್ ಬೆಳ್ಳೂರು, ಯೋಗೀಶ್ ಕುಮ್ಡೇಲು, ಶಶಿ ಕಮಾಜೆ, ಶಿವಪ್ರಸಾದ್ ಧನುಪೂಜೆ, ಸುರೇಶ ಬೆಂಜನಪದವು, ಜಗದೀಶ್ ಕಾಮಾಜೆ, ಹರೀಶ್ ಬಾಂಬಿಲ, ರವಿ ಮೊದಲಾದವರಿದ್ದರು.