ಬಂಟ್ವಾಳ: ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಪಂನಲ್ಲಿ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಯಿತು.ಕೊರೊನಾ ನಿಯಂತ್ರಣಕ್ಕೆ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲು ಪ್ರಯತ್ನಿಸಿ , ಅದರೆ ಭಯ ಹುಟ್ಟಿಸುವ ಕೆಲಸ ದಯವಿಟ್ಟು ಯಾರು ಮಾಡಬೇಡಿ ಎಂದರು. ಕಾವಳಮೂಡೂರು ಗ್ರಾ.ಪಂ.ನಲ್ಲಿ ಒಟ್ಟು 17 ಕೊರೊನಾ ಸೊಂಕು ಪ್ರಕರಣಗಳಿದ್ದು ಅದರಲ್ಲಿ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಉಳಿದ 15 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಿ.ಡಿ.ಒ.ಶಾಸಕರಿಗೆ ಮಾಹಿತಿ ನೀಡಿದರು. ಕೋವಿಡ್ ಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಗಳಲ್ಲಿ ಬೇಡಿಕೆಗಳಿದ್ದರೆ ಟಾಸ್ಕ್ ಫೋರ್ಸ್ ಮೀಟಿಂಗ್ ಕರೆದು ಶೀಘ್ರವಾಗಿ ನೀಡುವಂತೆ ತಾ.ಪಂ.ಇ.ಒ.ರಾಜಣ್ಣ ತಿಳಿಸಿದರು. ಕಾವಳಮೂಡೂರು ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷ ಅಜಿತ್ ಶೆಟ್ಟಿ, ತಹಶಿಲ್ದಾರ್ ರಶ್ಮಿ ಎಸ್ ಆರ್, ತಾ.ಪಂ.ಇ.ಒ,ರಾಜಣ್ಣ, ಪಿ.ಡಿ.ಒ ಸುಧಾಮಣಿ ಜಿ, ಗ್ರಾಮಕರಣಿಕೆ ಆಶಾ ಮಹಂದಲೆ ಮತ್ತಿತರರು ಉಪಸ್ಥಿತರಿದ್ದರು.