ಬಂಟ್ವಾಳ: ಲಾಕ್ ಡೌನ್ ಸಂದರ್ಭ ಸಂಕಷ್ಟಕ್ಕೊಳಗಾದವರಿಗೆ ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಊಟೋಪಚಾರ ಆರನೇ ದಿನವಾದ ಭಾನುವಾರ ಬಿ.ಸಿ.ರೋಡಿನಲ್ಲಿ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಅವರ ಉಪಸ್ಥಿತಿಯಲ್ಲಿ ಅವರ ಸೂಚನೆಯಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್ ಮುಂದಾಳತ್ವದಲ್ಲಿ ಬ್ಲಾಕ್ ಎಲ್ಲಾ ಪದಾಧಿಕಾರಿಗಳ ಸಹಕಾರದೊಂದಿಗೆ ಸಂಕಷ್ಟಕ್ಕೊಳಗಾದವರಿಗೆ ಊಟ ವಿತರಿಸಲಾಯಿತು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾದ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾದ ಬೇಬಿ ಕುಂದರ್, ಮಾಜಿ ಅಧ್ಯಕ್ಷ ಪ್ರಶಾಂತ್ ಕುಲಾಲ್ ನೆಟ್ಲ , ಸಾಮಾಜಿಕ ಜಾಲತಾಣ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಂಚಾಲಕ ಉಮ್ಮರ್ ಕುಂಞಿ, ಪದಾಧಿಕಾರಿಗಳಾದ ವಿನಯ್ ಸಿಂಧ್ಯಾ, ಹಫೀಜ್ ಸಾಲೆತ್ತೂರು, ರಾಹುಲ್ ಬಿ, ಇಸ್ರಾರ್ ಗೂಡಿನಬಳಿ, ಸಂದೀಪ್ ಬೆಂಜನಪದವು , ಜೈಸನ್ ಕ್ರಾಸ್ತಾ, ಸಿರಾಜ್ ಮದಕ ಸಹಿತ ಹಲವರು ಭಾಗವಹಿಸಿದ್ದರು. ಲಾಕ್ ಡೌನ್ ಇರುವವರೆಗೆ ಈ ಕಾರ್ಯ ನಡೆಯಲಿದ್ದು, ಪಕ್ಷದ ಹಲವು ನಾಯಕರು , ಕೊಡುಗೈ ದಾನಿಗಳು, ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಕೈ ಜೋಡಿಸಿದ್ದಾರೆ ಎಂದು ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾದ ಇಬ್ರಾಹಿಂ ನವಾಝ್ ತಿಳಿಸಿದ್ದಾರೆ..ಈ ಲಾಕ್ ಡೌನ್ ಸಂಕಷ್ಟ ಒಳಗಾಗಿರುವ ಜನರ ಸೇವೆ ಮಾಡಲು ಯುವ ಕಾಂಗ್ರೆಸ್ ಸಮಿತಿ ಪಾಣೆಮಂಗಳೂರು ಬ್ಲಾಕ್ ವತಿಯಿಂದ ಕೋವಿಡ್ ಹೆಲ್ಪ್ ಲೈನ್ ಆರಂಭಿಸಿದ್ದು ಅದರಲ್ಲಿ ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ತಂಡವನ್ನು ಐದು ವಿಭಾಗಗಳಾಗಿ ವಿಂಗಡಿಸಿ ವಿವಿಧ ಜವಾಬ್ದಾರಿಗಳನ್ನು ಅವರಿಗೆ ನೀಡಲಾಗಿದೆ ಎಂದವರು ತಿಳಿಸಿದ್ದಾರೆ.