ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಸಾವಿರಕ್ಕೂ ಅಧಿಕ ಕೊರೊನಾ ಸಕ್ರಿಯ ಪ್ರಕರಣಗಳು ಇದ್ದು, ಕಳೆದ ನಾಲ್ಕೈದು ದಿನಗಳಲ್ಲಿ ನಾಲ್ಕು ಪಟ್ಟು ಜಾಸ್ತಿ ಆಗಿರುವುದು ಗಂಭೀರ ವಿಷಯ. ಈ ಹಿನ್ನೆಲೆಯಲ್ಲಿ ನಿಷ್ಠುರವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಜನರು ಸಹಕರಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ. ಬಂಟ್ವಾಳ ಶಾಸಕರ ಕಚೇರಿಯಲ್ಲಿ ಶುಕ್ರವಾರ ವಾರ್ ರೂಮ್ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು ಈವರೆಗೆ ಸಹಾಯವಾಣಿ ಸದಸ್ಯರು ನಡೆಸಿದ ಕಾರ್ಯಚಟುವಟಿಕೆಗಳ ವಿವರ ಪಡೆದುಕೊಂಡು, ಕಾರ್ಯವೈಖರಿಗೆ ತೃಪ್ತಿ ವ್ಯಕ್ತಪಡಿಸಿದರು. ವಾರ್ ರೂಮ್ ಇನ್ನಷ್ಟು ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕಾಗಿದ್ದು, ಜನರ ಸಂಪರ್ಕವನ್ನೂ ಹೊಂದಿರಬೇಕು ಎಂದರು. ರೆಮಿಡಿಸಿವರ್ ಕೊರತೆ ಇಲ್ಲ, ವಾಕ್ಸಿನೇಶನ್ ಗೆ ನೋಂದಣಿ ಮಾಡಿಕೊಳ್ಳಿ ಎಂದು ಹೇಳಿದ ಶಾಸಕರು, ಕೊರೊನಾ ಸೋಂಕಿತ ಅರ್ಹ ಬಡವರಿಗೆ ಉಚಿತ ಕಿಟ್ ಅನ್ನು ವೈಯಕ್ತಿಕ ನೆಲೆಯಲ್ಲಿ ನೀಡುವುದಾಗಿ ಹೇಳಿದರು.
ವಾರ್ ರೂಮ್ ತಂಡದ ಸದಸ್ಯರಾದ ಬಿ.ದೇವದಾಸ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಪ್ರದೀಪ್ ಅಜ್ಜಿಬೆಟ್ಟು, ಪ್ರಕಾಶ್ ಅಂಚನ್, ಸುದರ್ಶನ ಬಜ, ರವೀಶ್ ಶೆಟ್ಟಿ, ಮನೋಜ್ ಕೋಟ್ಯಾನ್ ದೇವಿಪ್ರಸಾದ್ ಶೆಟ್ಟಿ, ವಜ್ರನಾಥ ಕಲ್ಲಡ್ಕ, ಕೇಶವ ದೈಪಲ, ಯಶೋಧರ ಕರ್ಬೆಟ್ಟು, ಪ್ರಭಾಕರ ಪ್ರಭು ಮಾಹಿತಿ ನೀಡಿದರು. ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾರ್ಗದರ್ಶನ ಮಾಡಿದರು. ಡೊಂಬಯ ಅರಳ, ಪವನ್ ಕುಮಾರ್ ಶೆಟ್ಟಿ, ದಿನೇಶ್ ಅಮ್ಟೂರು, ಮೋನಪ್ಪ ದೇವಸ್ಯ, ಅಶ್ವಥ್ ರಾವ್, ಅರುಣ್ ರೋಷನ್, ಪ್ರಣಾಮ್‌ರಾಜ್, ಸೀತಾರಾಮ ಪೂಜಾರಿ, ರಮನಾಥ ರಾಯಿ, ಪ್ರಕಾಶ್ ಬೆಳ್ಳೂರು, ಉಮೇಶ್ ಅರಳ, ಮಹೇಶ್ ಶೆಟ್ಟಿ, ಗಣೇಶ್ ರೈ, ದಿನೇಶ್ ದಂಬೆದಾರು, ದಾಮೋದರ್ ನೆತ್ತರಕೆರೆ ಮೊದಲಾದವರು ಉಪಸ್ಥಿತರಿದ್ದರು.