ಬಂಟ್ವಾಳ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅಭಿಮಾನಿಗಳಿಂದ ಉಚಿತ ಆಂಬುಲೆನ್ಸ್ ಸೇವೆ ಇರಲಿದೆ. ಗುರುವಾರ ಈ ಆಂಬುಲೆನ್ಸ್ ಸೇವೆಯನ್ನು ಬಿ.ಸಿ.ರೋಡಿನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಉದ್ಘಾಟಿಸಿದರು. ಕೋವಿಡ್ ರೋಗಿಗಳಿಗಾಗಿ ಉಚಿತ ಆಂಬುಲೆನ್ಸ್ ಸಂಪರ್ಕ ಸಂಖ್ಯೆ ಇಸ್ರಾರ್ ಗೂಡಿನಬಳಿ :7026704986, ಇಬ್ರಾಹಿಂ ನವಾಝ್ :9743520529, ಬೇಬಿ ಕುಂದರ್: 9844232973 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. ಆಂಬುಲೆನ್ಸ್ ಬಿಡುಗಡೆ ಸಂದರ್ಭ ಬಂಟ್ವಾಳದ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.