ಪಂಜಿಕಲ್ಲು, ಕಳ್ಳಿಗೆ, ಅಮ್ಟಾಡಿಗಳಲ್ಲಿ ಸಭೆ
ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಗುರುವಾರ ಪಂಜಿಕಲ್ಲು, ಕಳ್ಳಿಗೆ ಹಾಗೂ ಅಮ್ಟಾಡಿಗಳಲ್ಲಿ ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸಿದರು. ಈ ಸಂದರ್ಭ ಲಸಿಕೆ ಹಾಕುವ ಪ್ರಕ್ರಿಯೆಗೆ ಒತ್ತು ನೀಡಬೇಕು, ಟಾಸ್ಕ್ ಫೋರ್ಸ್ ಸದಸ್ಯರ ಕೈಯಲ್ಲಿ ಸಮರ್ಪಕ ಮಾಹಿತಿ ಇದ್ದರೆ, ಕೊರೊನಾ ಸೋಂಕಿತರಿಗೆ ಸಕಾಲಕ್ಕೆ ನೆರವು ನೀಡುವುದು ಹಾಗೂ ಎಚ್ಚರಿಕೆ ವಹಿಸುವುದು ಸಾಧ್ಯವಾಗುತ್ತದೆ ಎಂದರು.
ತಹಶೀಲ್ದಾರ್ ರಶ್ಮಿ ಎಸ್.ಆರ್., ತಾ.ಪಂ. ಇಒ ರಾಜಣ್ಣ ಅವರು ಕಟ್ಟುನಿಟ್ಟಿನ ಕ್ರಮಗಳ ಕುರಿತು ತಿಳಿಸಿದರು. ಆರೋಗ್ಯ ಇಲಾಖೆಯವರು ಗ್ರಾಮದ ಕೊರೊನಾ ಅಂಕಿಅಂಶಗಳ ಮಾಹಿತಿ ನೀಡಿದರು. ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಸದಸ್ಯೆ ಮಲ್ಲಿಕಾ ವಿ.ಶೆಟ್ಟಿ, ಕಂದಾಯ ನಿರೀಕ್ಷಕರಾದ ನವೀನ್ ಬೆಂಜನಪದವು, ರಾಮ ಕಾಟಿಪಳ್ಳ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಪಂಜಿಕಲ್ಲು ಗ್ರಾ.ಪಂ. ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಉಪಾಧ್ಯಕ್ಷೆ ಜಯಶ್ರೀ, ಅಭಿವೃದ್ಧಿ ಅಧಿಕಾರಿ ವಿದ್ಯಾಶ್ರೀ, ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷ ಸುನೀಲ್ ಕಾಯರ್‌ಮಾರ್, ಅಭಿವೃದ್ಧಿ ಅಽಕಾರಿ ರವಿ ಬಿ, ಕಳ್ಳಿಗೆ ಗ್ರಾ.ಪಂ.ಅಧ್ಯಕ್ಷೆ ಯಶೋಧಾ, ಉಪಾಧ್ಯಕ್ಷ ದಾಮೋದರ ನೆತ್ತರಕೆರೆ, ಪಿಡಿಒ ಯಶೋಧಾ ಉಪಸ್ಥಿತರಿದ್ದರು