STAY HOME STAY SAFE – ಜಿಲ್ಲೆಯಲ್ಲೀಗ 6486 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಿಸುತ್ತಿದ್ದು, ಶುಕ್ರವಾರ (ಏ.30) ಒಂದೇ ದಿನ 1205 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲಾಧಿಕಾರಿ ಕಚೇರಿ ಹೊರಡಿಸಿದ ಸಾರ್ವಜನಿಕ ಪ್ರಕಟಣೆಯಂತೆ ಇಂದು 380 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಅಂಕಿ ಅಂಶಗಳ ಪ್ರಕಾರ, ಇಡೀ ಜಿಲ್ಲೆಯಲ್ಲಿ 6486 ಮಂದಿ ಸೋಂಕಿತರು ಇದ್ದು, ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವರ್ಷದಿಂದ ಇದುವರೆಗೆ ದ.ಕ.ಜಿಲ್ಲೆಯಲ್ಲಿ 757 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ (ಅಥವಾ ಮೃತಪಟ್ಟವರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ). ಇವರಲ್ಲಿ 37866 ಗುಣಮುಖರಾಗಿದ್ದಾರೆ. ಗಮನಾರ್ಹ ಅಂಶವೆಂದರೆ, ಪರೀಕ್ಷೆ ನಡೆಸಿದ 7,39,170ರಲ್ಲಿ 6,94,061 ಮಂದಿಗೆ ನೆಗೆಟಿವ್ ಬಂದಿದೆ (ಅಂದರೆ ಕೊರೊನಾ ಸೋಂಕು ಕಂಡುಬಂದಿಲ್ಲ). ಇದುವರೆಗೆ 45,109 ಮಂದಿಗೆ ಸೋಂಕು ತಗಲಿದೆ.