ಬಂಟ್ವಾಳ

ಕೊರೊನಾ ಲಸಿಕೆ ಪಡೆದುಕೊಳ್ಳಿ, ಯುವಕರು ಲಸಿಕೆಗೆ ಮುನ್ನ ರಕ್ತದಾನ ಮಾಡಿರಿ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮನವಿ

ಬಂಟ್ವಾಳ: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ವಾರ್ ರೂಮ್ ರಚಿಸಿದ್ದು, ಇದರ ಸಭೆ ಸೋಮವಾರ ನಡೆಯಿತು. ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಅವರೊಂದಿಗೆ ಶಾಸಕರು ವಾರ್ ರೂಮ್ ಸದಸ್ಯರ ಸಭೆಯನ್ನು ನಡೆಸಿದರು. ಈ ಸಂದರ್ಭ ವಾರ್ ರೂಮ್ ತಂಡದ ಸದಸ್ಯರಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಆಸ್ಪತ್ರೆ, ವಾಕ್ಸಿನೇಶನ್, ಆಂಬುಲೆನ್ಸ್, ಕಚೇರಿ, ಔಷಧ, ಅಂತ್ಯಸಂಸ್ಕಾರ, ವೆಂಟಿಲೇಟರ್ ಮತ್ತು ಆಕ್ಸಿಜನ್, ಆಯುಷ್ಮಾನ್ ಭಾರತ್ ಯೋಜನೆಯ ಮಾಹಿತಿಗಳನ್ನು ನೀಡಲು ತುರ್ತುನಿರ್ವಹಣಾ ತಂಡವನ್ನು ರಚಿಸಲಾಗಿದ್ದು, ಇವರಿಗೆ ಆರೋಗ್ಯಾಧಿಕಾರಿ ಮಾರ್ಗದರ್ಶನ ಮಾಡಿದರು. ವಾರ್ ರೂಮ್ ತಂಡದ ಸದಸ್ಯರು ಈ ಸಂದರ್ಭ ಇದ್ದರು.

ಬಳಿಕ ಮಾತನಾಡಿದ ಶಾಸಕರು, ವಾರಕ್ಕೆ ಒಂದು ದಿನ ರಕ್ತದಾನ ಮಾಡಲು ಯುವಕರಿಗೆ ಮನವಿ ಮಾಡುತ್ತಿದ್ದೇವೆ. ರಕ್ತದಾನ ಮಾಡಿದ ನಂತರ ಲಸಿಕೆ ಪಡೆದುಕೊಳ್ಳಿ ಎಂದು ಎಲ್ಲರ ಸಹಕಾರಕ್ಕಾಗಿ ಮನವಿ ಮಾಡುತ್ತಿದ್ದೇನೆ.  ತಾಲೂಕಿನ ವ್ಯಾಪ್ತಿಯಲ್ಲಿ 294 ಮಂದಿ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದಾರೆ. ಇವರಲ್ಲಿ 205 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ 31 ಮಂದಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 9 ಮಂದಿ ಬಂಟ್ವಾಳ ಮತ್ತು 2 ವೆನ್ಲಾಕ್ ನಲ್ಲಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ಎಲ್ಲರೂ ಲಸಿಕೆ ಪಡೆಯಬೇಕು. 60 ವರ್ಷಕ್ಕೆ ಮೇಲ್ಪಟ್ಟವರು 35278 ಮಂದಿ ಅರ್ಹರಿದ್ದರೆ, ಅದರಲ್ಲಿ 18313 ಮಂದಿ ತೆಗೆದುಕೊಂದ್ದಾರೆ. ಇದರಲ್ಲಿ ಕೇವಲ 52 ಶೇ. ಸಾಧನೆ ಆಗಿದ್ದರೆ, 45ರಿಂದ 60 ವರ್ಷದೊಳಗಿನ 73035 ಮಂದಿ ಅರ್ಹರಿದ್ದರೆ, 18125 ಮಂದಿ ತೆಗೆದುಕೊಂಡಿದ್ದಾರೆ ಇದರಲ್ಲಿ ಕೇವಲ  24 ಶೇ. ಸಾಧನೆಯಾಗಿದೆ.ಈ ಹಿನ್ನೆಲೆಯಲ್ಲಿ ವಾರ್ ರೂಮ್ ಮಾಡಿದ್ದು, ಪ್ರತಿ ಎರಡು ದಿನಕ್ಕೊಮ್ಮೆ 29 ಮಂದಿಯ ತಂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಭೇಟಿಯಾಗುತ್ತೇವೆ. ಕೊರೊನಾಕ್ಕೆ ಸಂಬಂಧಿಸಿ ಇತ್ತೀಚಿಗಿನ ಮಾಹಿತಿ ಪಡೆದುಕೊಳ್ಳಲಾಗುವುದು ಎಂದರು.

ಜಾಹೀರಾತು

ವಾರ್ ರೂಮ್ ತಂಡ: ಕೊರೋನ ಸಹಾಯವಾಣಿ ಕೇಂದ್ರ: ದೇವಪ್ಪ ಪೂಜಾರಿ – 9945428865.  ಆಸ್ಪತ್ರೆಗಳ ಮಾಹಿತಿ: ದೇವದಾಸ್ ಶೆಟ್ಟಿ – 9449210250. ಡೊಂಬಯ್ಯ ಅರಳ – 9964319197, ಪವನ್ ಶೆಟ್ಟಿ – 9964596960, ವಜ್ರನಾಥ ಕಲ್ಲಡ್ಕ – 9449106906. ಆಕ್ಸಿಜನ್ ಮತ್ತು ವೆಂಟಿಲೇಟರ್ ಮಾಹಿತಿಗಾಗಿ: ಸುದರ್ಶನ್ ಬಜ – 9164476789, ಯಶೋಧರ ಕರ್ಬೆಟ್ಟು – 9036781725. ಆಂಬ್ಯುಲೆನ್ಸ್ ಮಾಹಿತಿಗಾಗಿ: ಪುರುಷೋತ್ತಮ ಶೆಟ್ಟಿ – 9448997577, ಪ್ರದೀಪ್ ಅಜ್ಜಿಬೆಟ್ಟು – 8971683256.  ವಾಕ್ಸಿನೇಷನ್ ಮಾಹಿತಿಗಾಗಿ: ರವಿಶ್ ಶೆಟ್ಟಿ ಕರ್ಕಳ – 9741969826, ಮೋನಪ್ಪ ದೇವಸ್ಯ – 8660789948, ಅಶ್ವಥ ರಾವ್ – 9686232379. ಆಯುಷ್ಮಾನ್ ಭಾರತ್ ಮಾಹಿತಿ: ಪ್ರಕಾಶ್ ಅಂಚನ್ – 9886543840, ಪ್ರಭಾಕರ್ ಪ್ರಭು – 9448997577, ಅರುಣ್ ರೋಷನ್ – 9845785435, ಪ್ರಣಾಮ್ ರಾಜ್ – 9071513655. ಶಾಸಕ ಕಚೇರಿ ಮಾಹಿತಿಗಾಗಿ: ಸೀತಾರಾಮ ಪೂಜಾರಿ – 9482135463, ರಮಾನಾಥ ರಾಯಿ – 9945538607, ಮನೋಜ್ ಕೋಟ್ಯಾನ್ – 9845885824, ಪ್ರಕಾಶ್ ಬೆಳ್ಳೂರು – 8970814134, ಉಮೇಶ ಅರಳ – 9741456337, ಮಹೇಶ್ ಶೆಟ್ಟಿ – 8310720388. ಔಷಧಿ ಮಾಹಿತಿಗಾಗಿ: ಗಷೇಶ್ ರೈ – 9449593284, ರಂಜಿತ್ ಮೈರ – 9663161148, ದೇವಿಪ್ರಸಾದ್ ಶೆಟ್ಟಿ – 9741753827, ದಿನೇಶ್ ಅಮ್ಟೂರು – 9482498369, ಯಶವಂತ ನಾಯ್ಕ – 9916054307. ಅಂತ್ಯ ಸಂಸ್ಕಾರ ಮತ್ತು ತುರ್ತು ವಾಹನದ ಮಾಹಿತಿಗಾಗಿ: ದಿನೇಶ್ ದಂಬೆದಾರು – 8722442148, ಕೇಶವ ದೈಪಲ – 9964716738.

ಬಿಜೆಪಿ ಯುವ ಮೋರ್ಚಾ ರಕ್ತದಾನ ಶಿಬಿರ ಏರ್ಪಡಿಸಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತೆ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ