ಖಾಲಿ ಜಾಗ ಸದ್ಬಳಕೆ ಮಾಡಿ – ಇದು ಜನಧ್ವನಿ, ನಿಮಗೇನನಿಸುತ್ತದೆ?
ಬಿ.ಸಿ.ರೋಡಿನ ನಿರುಪಯುಕ್ತ ಅಥವಾ ಬಳಕೆಯಾಗದ.. ನೀವು ಹೇಗೆ ಹೇಳುತ್ತೀರೋ ಗೊತ್ತಿಲ್ಲ. ರಿಯಲ್ ಎಸ್ಟೇಟ್ ತಾರಕಾವಸ್ಥೆಯಲ್ಲಿದ್ದ ಸಂದರ್ಭ ಇಲ್ಲಿ ಜನಜಂಗುಳಿ. ಈಗ ಕಸ ಕಡ್ಡಿಗಳು, ಉಪಯೋಗಿಸಿದ ತ್ಯಾಜ್ಯದ ಹಾವಳಿ. ಈ ಜಾಗದಲ್ಲಿ ಮಹತ್ತರ ಬದಲಾವಣೆ ಆಗುತ್ತದೆ ಎಂಬ ಶಂಕೆಯನ್ನು ಆಗಾಗ್ಗೆ ಜನರು ವ್ಯಕ್ತಪಡಿಸುತ್ತಾರೆ. ಆದರೆ ಸದ್ಯಕ್ಕೆ ಇದು ಮೂತ್ರಶಂಕೆಗೆ ಬಳಕೆಯಾಗುತ್ತಿದೆ.
ಇದು ಸುಮಾರು 94 ವರ್ಷ ಬಂಟ್ವಾಳ ತಾಲೂಕಿನ ನೋಂದಣಿ ಕೆಲಸಗಳಿಗೆ ಬಳಕೆಯಾಗುತ್ತಿದ್ದ ಜಾಗ. ಉಪನೋಂದಣಿ ಕಚೇರಿ. ಈಗ ಈ ಕಟ್ಟಡಕ್ಕೆ ಸುಮಾರು 97ರ ಹರೆಯ. ಇನ್ನು ಮೂರು ವರ್ಷಗಳಾದರೆ, ಶತಮಾನೋತ್ಸವ. ಮೂರು ವರ್ಷಗಳ ಹಿಂದೆಯೇ ಈ ಕಟ್ಟಡ ಧರಾಶಾಹಿಯಾಗುತ್ತದೆ ಎಂಬ ಸುದ್ದಿ ಇತ್ತು. ಆದರೆ ಇಲ್ಲಿ ಯಾವುದೇ ಚಟುವಟಿಕೆಯೂ ನಡೆಯುತ್ತಿಲ್ಲ, ಇದರ ನಿರ್ವಹಣೆಯೂ ಆಗುತ್ತಿಲ್ಲ, ಬದಲಾಗಿ ಅನಪೇಕ್ಷಿತ ಚಟುವಟಿಕೆ, ಅನಧಿಕೃತ ಶೌಚ, ಕಸ ಎಸೆಯುವುದೇ ಮೊದಲಾದ ಕೃತ್ಯಗಳಿಗೆ ಈ ಜಾಗ ಹತ್ತಿರದಲ್ಲೇ ಬಂಟ್ವಾಳ ನಗರ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯ ಇದೆ. ಮಿನಿ ವಿಧಾನಸೌಧದ ಬಗಲಲ್ಲೇ ಈ ಬಿಲ್ಡಿಂಗ್ ಇರುವುದೇ ದೊಡ್ಡ ಬಿಲ್ಡಪ್ಪು!!.. ಹಾಗೆ ನೋಡಿದರೆ, ಬಿ.ಸಿ.ರೋಡಿನಲ್ಲಿ ಸದ್ಬಳಕೆಯಾಗದ ಖಾಲಿ ಜಾಗಗಳು ಅದೆಷ್ಟೋ ಇವೆ. ಈ ಕಟ್ಟಡದ ಸುತ್ತಮುತ್ತಲೇ ಸುಮಾರು ಮುಕ್ಕಾಲು ಎಕ್ರೆ ಜಾಗದಲ್ಲಿ ನೀಟ್ ಆಗಿ ಪಾರ್ಕಿಂಗ್ ವ್ಯವಸ್ಥೆಯನ್ನೋ, ಮತ್ತೊಂದನ್ನೋ ಮಾಡಬಹುದು. ಕಣ್ತೆರೆದು ನೋಡಬೇಕಾದವರು ಸರಿಯಾಗಿ ಪರಾಂಬರಿಸಿದರೆ ಸಾಕು..ಈಗ ಮತ್ತೆ ಕೋವಿಡ್.. ಇನ್ನು ಯಾವಾಗಲೋ..