ಬಂಟ್ವಾಳ: ರಮ್ಝಾನ್ ಉಪವಾಸ ಹಿನ್ನೆಲೆಯಲ್ಲಿ ಸಂಜೆ ಮನೆಗೆ ತೆರಳುವ ಸಂದರ್ಭ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿದ ಸುದ್ದಿ ಕೇಳಿ, ಕೂಡಲೇ ಕಾರ್ಯಾಚರಣೆಯನ್ನು ನಡೆಸಿ, ಆತನನ್ನು ರಕ್ಷಿಸಿದ ಗೂಡಿನಬಳಿಯ ಸತ್ತಾರ್ ಅವರ ಸೇವಾಮನೋಭಾವಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.ಶುಕ್ರವಾರ ಸಂಜೆ ನೇತ್ರಾವತಿ ನದಿಗೆ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿದ್ದನು. ಕೂಡಲೇ ಆತನನ್ನು ಸತ್ತಾರ್ ಮತ್ತವರ ಸ್ನೇಹಿತ ಸಾದಿಕ್ ರಕ್ಷಿಸದೇ ಇದ್ದರೆ, ಅನಾಹುತವಾಗುತ್ತಿತ್ತು. ರಮ್ಝಾನ್ ಉಪವಾಸದ ಹಿನ್ನೆಲೆಯಲ್ಲಿ ಸಂಜೆ ಮನೆಗೆ ತೆರಳುವ ಸಂದರ್ಭ ಸ್ಥಳೀಯ ಹುಡುಗರು ಯುವಕನೊಬ್ಬ ನೇತ್ರಾವತಿಗೆ ಹಾರಿದ ವಿಚಾರವನ್ನು ತಿಳಿಸಿದ್ದು ಕೂಡಲೇ ಸಾದಿಕ್ ಎಂಬವರ ಸಹಾಯದಿಂದ ಆತನನ್ನು ರಕ್ಷಿಸಿದ್ದು, ಜೀವ ಉಳಿಸಿದ್ದೇವೆ. ಯುವಕ ತನ್ನ ಮೊಬೈಲ್ ಅನ್ನು ಸೇತುವೆಯಲ್ಲಿ ಬಿಟ್ಟು ಹೋಗಿದ್ದ ಕಾರಣ ಕೂಡಲೇ ಅವರ ಮನೆಯವರನ್ನು ಸಂಪರ್ಕಿಸಲು ಸಾಧ್ಯವಾಯಿತು. ಯುವಕನ ಪ್ರಾಣ ಉಳಿಸಿದ್ದು ಸಮಾಧಾನಕರ ವಿಚಾರ ಎಂದು ಸತ್ತಾರ್ ಹೇಳಿದ್ದಾರೆ.
.