ಬಿ.ಸಿ.ರೋಡ್ ನ ಸರ್ವೀಸ್ ರಸ್ತೆಯಿಂದ ಮಿನಿ ವಿಧಾನಸೌಧದ ಕಡೆಗೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ಬದಲಾವಣೆ ಮಾಡಲಾಗಿದೆ. ಪೊಲೀಸ್ ಸ್ಟೇಶನ್ ಮತ್ತು ಕೋರ್ಟ್ ಗೆ ಹೋಗುವ ಮಾಮೂಲಿ ದಾರಿಯನ್ನು ಮುಚ್ಚಲಾಗಿದ್ದು, ಇದೀಗ ಬದಲಿ ದಾರಿಯಾಗಿ ಮಂಗಳೂರು ಬಸ್ಸುಗಳು ನಿಲ್ಲುವ ಸರ್ವೀಸ್ ರಸ್ತೆಯ ಭಾಗದಿಂದ ಪ್ರವೇಶ ಕಲ್ಪಿಸಲಾಗಿದೆ. ಅಲ್ಲಿದ್ದ ನಿರುಪಯುಕ್ತ ಜಾಗದಲ್ಲಿ ಜೆಸಿಬಿಯಿಂದ ಅಗೆದು ರಸ್ತೆ ನಿರ್ಮಿಸಲಾಗಿದೆ. ಇದೀಗ ಕೋರ್ಟ್ ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣೆ, ಡಿವೈಎಸ್ಪಿ ಕಚೇರಿಗೆ ಬರಬೇಕಾದರೆ, ಸರ್ವೀಸ್ ರಸ್ತೆಯ ಪಕ್ಕ ಮಾಡಿದ ದಾರಿಯಿಂದ ಆಗಮಿಸಬೇಕಾಗುತ್ತದೆ. 2 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಇದೀಗ ಪ್ರಗತಿಯಲ್ಲಿದ್ದು, ಮಿನಿ ವಿಧಾನಸೌಧ ದ ಪಾರ್ಶ್ವದಲ್ಲಿರುವ ಜಾಗದ ಕಾಂಕ್ರೀಟ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.