ಬಂಟ್ವಾಳ

ಸಿಡಿಲಿಗೆ ನಗ, ನಗದು ಕಳೆದುಕೊಂಡ ಕುಟುಂಬ, ಆಸರೆಯಾದ ಬೆಳದಿಂಗಳು ಯೋಜನೆ

ಬಂಟ್ವಾಳ: ಭಾನುವಾರ ರಾತ್ರಿ ಭಾರೀ ಗುಡುಗು-ಸಿಡಿಲಿನಿಂದ ಕೂಡಿದ ಮಳೆ ಸಂದರ್ಭ ಸಜಿಪಮುನ್ನೂರು ಗ್ರಾಮದ ಮಿತ್ತಕಟ್ಟೆ ನಿವಾಸಿ ಲಲಿತ ಅವರ ಮನೆಗೆ ಸಿಡಿಲು ಬಡಿದ ವೇಳೆ ಮನೆಯ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣಗಳು ಸುಟ್ಟು ಕರಕಲಾಗಿದ್ದವು. ಸಂಬಂಧಿಕರ ಮದುವೆಗೆಂದು ಸಂಗ್ರಹಿಸಿಟ್ಟಿದ್ದ ನಗದು ಹಣವೂ ಬೆಂಕಿಗೆ ಆಹುತಿಯಾಗಿದ್ದವು.  ಈ ಕಾರಣದಿಂದ ತುರ್ತು ನೆರವು ನೀಡುವ ನಿಟ್ಟಿನಲ್ಲಿ ಗುರುಬೆಳದಿಂಗಳು ಸೇವಾ ಯೋಜನೆ ಕುದ್ರೋಳಿ ಇದರ ಪ್ರಥಮ ಸೇವಾ ಯೋಜನೆಯ ಮೊದಲ ಆಸರೆ ನೆರವು ಯೋಜನೆಯಿಂದ 50 ಸಾವಿರ ರೂಪಾಯಿ ಸಹಾಯಧನ ನೀಡಲಾಯಿತು. ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಅಭಿವೃದ್ದಿ ಸಮಿತಿ ಅಧ್ಯಕ್ಷ ರಾದ ದೇವೇಂದ್ರ ಪೂಜಾರಿ, ದೇವಳ ಆಡಳಿತ ಸಮಿತಿ ಕೋಶಾಧಿಕಾರಿ ಪದ್ಮರಾಜ್ ಆರ್., ಉದ್ಯಮಿ ರವಿ, ಸತೀಶ್ ಗುರುಮಂದಿರ, ವಿವೇಕ್ ಕೋಟ್ಯಾನ್, ಯಶವಂತ್ ದೇರಾಜೆ, ರಾಜೇಶ್ ಸುವರ್ಣ, ಪ್ರವೀಣ್ ಅಂಚನ್ ಮೊದಲಾದವರಿದ್ದರು. ಮನೆಗೆ ಉಂಟಾದ ಸಿಡಿಲಾಘಾತದಿಂದ ವಿದ್ಯುತ್ ಉಪಕರಣಗಳು, ಪೀಠೋಪಕರಣಗಳ ಸಹಿತ ಇತರ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ. ಕೋಣೆಯೊಳಗಿನ ಕಪಾಟಿಗೂ ಸಿಡಿಲು ಬಡಿದ ಪರಿಣಾಮ ಕಪಾಟಿನಲ್ಲಿದ್ದ ಚಿನ್ನಾಭರಣಗಳು ಸುಟ್ಟು ಕರಕಲಾಗಿದ್ದು, ಹಳದಿ ಚಿನ್ನ ಕಪ್ಪು ಬಣ್ಣಕ್ಕೆ ತಿರುಗಿದ್ದು ಭಾರೀ ಹಾನಿ ಸಂಭವಿಸಿದೆ. ಸಂಬಂಧಿಕರ ಮದುವೆಗೆಂದು ಸಂಗ್ರಹಿಸಿಟ್ಟಿದ್ದ ನಗದು ಹಣ ಸಿಡಿಲಿನ ಬೆಂಕಿಗೆ ಸುಟ್ಟು ಹೋಗಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts