ಕಲ್ಲಡ್ಕ

ಹನುಮಾನ್ ಚಾಳೀಸಾ ಪಠಣದೊಂದಿಗೆ ಅಮ್ಟೂರಿನಲ್ಲಿ ಭಜನಾ ಸಂಕೀರ್ತನೆ ಸಮಾರೋಪ

1 / 7
3 / 7

ಬಂಟ್ವಾಳ: ಒಡಿಯೂರು ಶ್ರೀ ಸಾಧ್ವಿ ಮಾತಾನಂದಮಯೀ ಅವರು ಹನುಮಾನ್ ಚಾಳೀಸಾ ಪಠಣವನ್ನು ಸಾರ್ವಜನಿಕ ಭಜಕರೊಂದಿಗೆ ಮಾಡುವ ಮೂಲಕ ಅಮ್ಟೂರಿನಲ್ಲಿ ನಡೆದ ಭಜನಾ ಸಂಕೀರ್ತನೆ ಸಮಾರೋಪ ನಡೆಯಿತು.

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮಷಷ್ಟ್ಯಬ್ದ ಹಿನ್ನೆಲೆಯಲ್ಲಿ ಕಲ್ಲಡ್ಕ ವಲಯದಲ್ಲಿ ನಡೆದ ಸರಣಿ ಕಾರ್ಯಕ್ರಮಗಳಲ್ಲಿ ಒಂದಾದ ಭಜನಾ ಸಂಕೀರ್ತನೆ ಅಮ್ಟೂರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನೆರವೇರಿತು.

ಈ ಸಂದರ್ಭ ಮಾತನಾಡಿದ ಮಾತಾನಂದಮಯೀ, ಎಲ್ಲರೂ ಮನೆಮೆನೆಗಳಲ್ಲಿ ಹನುಮಾನ್ ಚಾಲಿಸ್ ಪಠಿಸಬೇಕು. ಹುಟ್ಟುಹಬ್ಬದ ಆಚರಣೆ ಸಮಾಜಕ್ಕೆ ಸಂದೇಶವನ್ನು ನೀಡುವ ಕಾರ್ಯಕ್ರಮ ಆಗಬೇಕು. ದೇವರನ್ನು ತಲುಪಲು ಭಜನೆ ಬಹಳ ಸುಲಭ ಸಾಧನ. ಭಾವಯುಕ್ತವಾಗಿ ಭಜನೆ ಮಾಡಿದರೆ ಅಲ್ಲಿ ದೇವರು ನೆಲೆಸುತ್ತಾನೆ ಎಂದರು.

ಜಾಹೀರಾತು

ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮಾಜದ ಪರಿವರ್ತನೆಯಲ್ಲಿ ನಾವು ಸೇರಿಕೊಳ್ಳಬೇಕು. ಎಂದು ತಿಳಿಸಿದರು.

ಕಲ್ಲಡ್ಕ ವಲಯಾಧ್ಯಕ್ಷ, ಹಿಂದು ಜಾಗರಣಾ ವೇದಿಕೆ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ, ಕಾರ್ಯಕ್ರಮಗಳಿಂದ ಸಂಘಟನೆ ಬೆಳೆಯುತ್ತದೆ ಎಂದರು.

ಸಭಾಧ್ಯಕ್ಷತೆಯನ್ನು ಅಮ್ಟೂರು ಗ್ರಾಮದ ಹಿರಿಯರು ಕೃಷಿಕರಾದ ನಂದಗೋಕುಲ ಮಹಾಬಲ ಶೆಟ್ಟಿ ವಹಿಸಿದ್ದರು.

ಕಲ್ಲಡ್ಕ ವಲಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಶೆಟ್ಟಿ ಬೊಂಡಾಲ, ಶ್ರೀಕೃಷ್ಣ ಭಜನಾ ಮಂದಿರ ಅಧ್ಯಕ್ಷ ರಮೇಶ್ ಶೆಟ್ಟಿ ಕರಿಂಗಾನ, ಗೌರವಾಧ್ಯಕ್ಷ ಶಂಕರನಾರಾಯಣ ಐತಾಳ, ಕಲ್ಲಡ್ಕ ವಲಯ ಉಪಾಧ್ಯಕ್ಷ ಬೈದರಡ್ಕ ಪ್ರಭಾಕರ ಶೆಟ್ಟಿ, ರಾಷ್ಟ್ರ ಸೇವಿಕಾ ಸಮಿತಿ ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಡಾ. ಕಮಲಾ ಪ್ರಭಾಕರ ಭಟ್‌ ಕಲ್ಲಡ್ಕ, ಹಿಂಜಾವೇ ಮಂಗಳೂರು ವಿಭಾಗ ಸಂಪರ್ಕ ಪ್ರಮುಖ್ ರತ್ನಾಕರ್ ಶೆಟ್ಟಿ, ನೇತಾಜಿ ಯುವಕ ಸಂಘ ಕಲ್ಲಡ್ಕದ ಗೌರವಾಧ್ಯಕ್ಷ ನಾಗೇಶ್ ಕಲ್ಲಡ್ಕ, ಬಾಳ್ತಿಲ ಗ್ರಾಪಂ ಅಧ್ಯಕ್ಷೆ ಹಿರಣ್ಮಯಿ, ಗೋಳ್ತಮಜಲು ಗ್ರಾಪಂ  ಉಪಾಧ್ಯಕ್ಷೆ ಲಕ್ಷ್ಮೀ ಪ್ರಭು, ಪ್ರಮುಖರಾದ  ಗೋಪಾಲಕೃಷ್ಣ ಪೂವಳ, ಶರತ್ ಕುಮಾರ್  ಅಮ್ಟೂರು, ಗೋಪಾಲ್ ಪೂಜಾರಿ ವೆಂಕಟ್ರಾಯ ಪ್ರಭು, ಒಡಿಯೂರು ಗ್ರಾಮ ವಿಕಾಸದ ಯೋಜನಾಧಿಕಾರಿ ಜಯಲಕ್ಷ್ಮೀ ಉಪಸ್ಥಿತರಿದ್ದರು. ದೇವರ ಪ್ರಾರ್ಥನೆಯನ್ನು ಅಶ್ವಿನಿ ಭಟ್ ನೆರವೇರಿಸಿದರು. ಶ್ರೀಗಳ ಜನ್ಮ ಷಷ್ಟ್ಯಬ್ದಿ ಬಂಟ್ವಾಳ ತಾಲೂಕು ಸಮಿತಿ ಕಾರ್ಯದರ್ಶಿ ದಿನೇಶ್ ಅಮ್ಟೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಲ್ಲಡ್ಕ ವಲಯದ ಸಂಘಟನಾ ಕಾರ್ಯದರ್ಶಿ ಕುಶಾಲಪ್ಪ ಅಮ್ಟೂರು  ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ರಾಧಾಕೃಷ್ಣ ಕುಲಾಲ್ ವಂದಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.