ಬಂಟ್ವಾಳ: ಕಡೇಶಿವಾಲಯದ ಪೆರ್ಲಾಪು ಶಾಲಾ ಮೈದಾನದಲ್ಲಿ ಶ್ರೀ ಚಿಂತಾಮಣಿ ನೃತ್ಯ ತಂಡ ಏರ್ಪಡಿಸಿದ ಸ್ಪರ್ಧಾ ಫೈನಲ್ಸ್ ನಡೆಯಿತು.
ತಂಡವು ಆನ್ಲೈನ್ ಮೂಲಕ ವೈಯಕ್ತಿಕ ಮತ್ತು ತಂಡವಾರು ನೃತ್ಯ ದ ಹಾಗೂ ಸಂಗೀತ ದ ಸ್ಪರ್ಧೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಅದರ ಫೈನಲ್ ಮತ್ತು ಹಲವು ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸುವ ಕಾರ್ಯಕ್ರಮ ಹಾಗೂ ಆಂಬುಲೆನ್ಸ್ ಲೋಕಾರ್ಪಣಾ ಕಾರ್ಯಕ್ರಮವನ್ನು ಅಮರನಾಥ ಅಜಿಲ ಅರಿಕಲ್ಲು ಉದ್ಘಾಟಿಸಿದರು. ಕಟ್ಟೆಮಾರುವಿನ ಮಂತ್ರದೇವತೆ ಸಾನಿಧ್ಯದ ಧರ್ಮದರ್ಶಿ ಮನೋಜ್ ಕಟ್ಟೆಮಾರು ಆಂಬುಲೆನ್ಸ್ ಉಧ್ಘಾಟಿಸಿ ತಂಡದ ಕಾಳಜಿಯನ್ನು ಶ್ಲಾಘಿಸಿದರು. ಮುಖ್ಯ ಅತಿಥಿಯಾಗಿ ಜಿಪಂ ಎಇಇ ತಾರಾನಾಥ ಸಾಲ್ಯಾನ್ ಆಗಮಿಸಿ ಸಮಾಜಮುಖಿ ಕೆಲಸಗಳಿಗೆ ಪ್ರೋತ್ಸಾಹ ಅಗತ್ಯ ಎಂದರು.
ಚೆಸ್ ಪ್ರತಿಭೆ ಯಶಸ್ವಿ, ಸಂಗೀತ ಕಲಾವಿದ ಚಂದ್ರಶೇಖರ ಆಚಾರ್ಯ, ಅಂತಾರಾಷ್ಟ್ರೀಯ ಬಾಲಪ್ರತಿಭೆ ಶ್ರಾವ್ಯಾ ಕುಪ್ಪೆಪದವು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಂಗೀತಾ ಶರ್ಮಾ ಪಿ.ಜಿ. ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಮಾಣಿ ಕುಲಾಲ ಸಂಘ ಅಧ್ಯಕ್ಷ ಭೋಜನಾರಾಯಣ ಕುಲಾಲ್ ವಹಿಸಿದ್ದರು.ಶ್ರೀ ಚಿಂತಾಮಣಿ ಡಾನ್ಸ್ ಗ್ರೂಪ್ ನ ಕೊರಿಯೋಗ್ರಾಫರ್ ಆದ ಮಹೇಶ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕಟ್ಟೆಮಾರು ಕೊರೋನಾ ಪ್ರಯುಕ್ತ ನೀಡಿರುವ ರಜಾ ಅವಧಿಯಲ್ಲಿ ಮಕ್ಕಳಿಗೆ ತಮ್ಮ ಪ್ರತಿಭೆ ಯನ್ನು ಪ್ರದಶಿ೯ಸಲು ಅವಕಾಶ ಸಿಗಬೇಕು ಎನ್ನುವ ಉದ್ದೇಶದಿಂದ ಆನ್ಲೈನ್ನಲ್ಲಿ ಸ್ಪರ್ಧೆ ನಡೆಸಿ ಅದರ ಫಲಿತಾಂಶ ಪಾರದರ್ಶಕತೆಯಿಂದ ಕೂಡಿರಬೇಕೆಂಬ ನಿಟ್ಟಿನಲ್ಲಿ ಫೈನಲ್ ಸ್ಪರ್ಧೆಯನ್ನು ಬಯಲು ರಂಗಮಂಟಪದಲ್ಲಿ ನಡೆಸಲಾಗಿದೆ ಎಂದರು.
ಚಿಂತಾಮಣಿ ಹಬ್ ಅರ್ಪಿಸಿದ ಕಡೇಶಿವಾಲಯದ ಬೊಲ್ಪು ಮತ್ತು ಮಾಯೊದ ಮಾಣಿಕ್ಯ ಕೊರಗಜ್ಜನ ತುಳು ಭಕ್ತಿಗೀತೆ ಹಾಗೂ ವೈರಿ ಎಂಬ ಕಿರುಚಿತ್ರ, ದಿ ನೆಕ್ಸ್ಟ್ ಬರ್ತ್ ಕ್ರಿಯೇಶನ್ಸ್ ಅರ್ಪಿಸುವ ಕುಡ್ಲ ನಮ್ಮ ಊರು ಕನ್ನಡ ಮತ್ತು ತುಳು ಅವತರಣಿಕೆಯಲ್ಲಿರುವ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಕಡೇಶಿವಾಲಯ ಗ್ರಾಪಂ ಅಧ್ಯಕ್ಷ ಸುರೇಶ್ ಬನಾರಿ, ವಿವಿಧ ಕ್ಷೇತ್ರಗಳ ಪ್ರಮುಖರಾದ ರವಿ ಪೂಜಾರಿ ಬೆಲಿಂಜ, ಸಂಪತ್ ಪೂಜಾರಿ ನೈತ್ತೋಡಿ, ಶೈಲೇಶ್ ಪೂಜಾರಿ ಕುಚ್ಚೆಗುಡ್ಡೆ, ಸದಾನಂದ ಬರಿಮಾರು, ನಾಗೇಶ್ ಕುಲಾಲ್, ಗ್ರಾಪಂ ಸದಸ್ಯ ಹೇಮಂತ್ ಪೂಜಾರಿ ಮುಳಿಂಜ, ನವೀನ್ ಪೂಜಾರಿ ಕಾರಾಜೆ, ಹರೀಶ್ ಪೂಜಾರಿ, ಜಗದೀಶ್ ಬಜ್ಯಾರ್. ಶೈನಿ ಆಚಾರ್ಯ, ಸಂಪತ್ ಕೋಟ್ಯಾನ್ ಕಡೇಶಿವಾಲಯ, ರೇವತಿ, ಯಶವಂತಿ ಉಚ್ಚಿಲ್ ಉಪಸ್ಥಿತರಿದ್ದರು. ವೈಯಕ್ತಿಕ ಗಾಯನ, ನೃತ್ಯ, ಗುಂಪು ನೃತ್ಯ ಸ್ಪರ್ಧೆ ಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ರೂಪಾ ಎಸ್. ಗೌಡ ಸ್ವಾಗತಿಸಿದರು. ರಾಜೇಶ್ ಎಸ್ ಬಲ್ಯ ವಂದಿಸಿದರು. ಸುಖೇಶ್ ಮತ್ತು ಗೌತಮ್ ಕಾರ್ಯಕ್ರಮ ನಿರೂಪಿಸಿದರು.