ಮಹಿಳೆ ಮತ್ತು ಪುರುಷ ಆಗಮಿಸಿ ರಾಡ್ ನಿಂದ ಹಲ್ಲೆ ನಡೆಸಿದ್ದಾಗಿ ದೂರು
ಬಂಟ್ವಾಳ: ಬಿ.ಸಿ.ರೋಡಿನ ವಾಣಿಜ್ಯ ಸಂಕೀರ್ಣವೊಂದರಲ್ಲಿ ಲಕ್ಷ್ಮೀಕಾಂತ ಭಟ್ ಹೆಸರಲ್ಲಿ ಜ್ಯೋತಿಷ್ಯ ಹೇಳುವುದಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಗಲಕೋಟೆ ಮೂಲದ ಪುಂಡಲೀಕ ಹನುಮಂತಪ್ಪ ನಾಯ್ಕರ್ ಎಂಬವರಿಗೆ ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆ ಇಬ್ಬರು ಆಗಮಿಸಿ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಜ್ಯೋತಿಷಿ ಮಂಗಳೂರಿನ ಆಸ್ಪತ್ರೆಗೆ ದಾಖಲಾದರು. ಬಂಟ್ವಾಳ ನಗರ ಠಾಣೆ ಇನ್ಸ್ ಪೆಕ್ಟರ್ ಚೆಲುವರಾಜು, ಅಪರಾಧ ವಿಭಾಗ ಎಸ್.ಐ. ಕಲೈಮಾರ್ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಘಿದೆ.
ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸನಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷಾಲಯದ ಪಂಡಿತ್ ಲಕ್ಮೀಕಾಂತ್ ಭಟ್ ಹೆಸರಲ್ಲಿ ಕಾರ್ಯಾಚರಿಸುತ್ತಿದ್ದ ಈ ಜ್ಯೋತಿಷಿಗೆ ಮೂಡುಬಿದಿರೆಯಿಂದ ಆಗಮಿಸಿದ್ದಾಗಿ ಹೇಳಿ ಮಧ್ಯಾಹ್ನ ಮಹಿಳೆ ಮತ್ತು ಪುರುಷನೊಬ್ಬ ಆಗಮಿಸಿ ಜ್ಯೋತಿಷ ಕೇಳುವ ನೆಪದಲ್ಲಿ ಬಂದಿದ್ದರು. ಈ ವೇಳೆ ಜ್ಯೋತಿಷಿಗೆ ರಾಡ್ ನಿಂದ ಹಲ್ಲೆಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ಘಟನೆಯ ವಿವರಗಳನ್ನು ಪೊಲೀಸರು ಕಲೆ ಹಾಕುತ್ತಿದ್ದು, ತನಿಖೆ ನಡೆಯುತ್ತಿದೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…