ಬಂಟ್ವಾಳ

ಬಂಟ್ವಾಳದಲ್ಲಿ ಜಾತ್ರೋತ್ಸವ ಆರಂಭ, ಮಾ.21ರಂದು ಬ್ರಹ್ಮರಥೋತ್ಸವ

ಬಂಟ್ವಾಳ: ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಜಾತ್ರೋತ್ಸವಗಳು ಆರಂಭಗೊಂಡಿದ್ದು, ಭಾನುವಾರ ಬ್ರಹ್ಮರಥೋತ್ಸವ ಸಂಭ್ರಮ.

ಮಾ.17ರಂದು ಧ್ವಜಾರೋಹಣ. ಗರುಡೋತ್ಸವ ನಡೆಯಿತು. ಮಾ.18ರಂದು ಹನುಮಂತೋತ್ಸವ, ಶುಕ್ರವಾರ ಮಾ.19ರಂದು ಪಂಚಾಮೃತಾಭಿಷೇಕ, ಶತಕಲಶಾಭಿಷೇಕ, ಪುಳಕಾಭಿಷೇಕ, ಭಾಗೀರಥಿ ಅಭಿಷೇಕ, ಕನಕಾಭಿಷೇಕ ನಡೆದವು. ಶನಿವಾರ ಮಾ.20ರಂದು ಜಲಕ್ರೀಡೆ, ಮೃಗಯಾತ್ರೋತ್ಸವ, ಬೆಳ್ಳಿ ರಥೋತ್ಸವ ನಡೆಯಲಿದೆ. 21ರಂದು  ಬೆಳಗ್ಗೆ ಗಂಟೆ ೯.೩೦ಕ್ಕೆ ಮೊಕ್ತೇಸರರ, ಹತ್ತು ಸಮಸ್ತರ ಪ್ರಾರ್ಥನೆ, ಮಹಾಪೂಜಾರಂಭ, ಅಭಿಷೇಕಾದಿಗಳು. ಮಧ್ಯಾಹ್ನ ೧ಕ್ಕೆ ಯಜ್ಞಾರಂಭ, ೪.೧೫ಕ್ಕೆ ಯಜ್ಞಾರತಿ, ಪೂರ್ಣಾಹುತಿ, ಬಲಿ. ೫.೩೦ಕ್ಕೆ ಬ್ರಹರಥಾರೋಹಣ, ಸಮಾರಾಧನೆ. ರಾತ್ರಿ ೧ಕ್ಕೆ ಬ್ರಹ್ಮರಥೋತ್ಸವ. ರಾತ್ರಿ ೩.೩೦ಕ್ಕೆ ವಸಂತ ಪೂಜೆ, ಏಕಾಂತ ಸೇವೆ ಇತ್ಯಾದಿ ನಡೆಯಲಿವೆ. ಸೋಮವಾರ ಅವಭೃತೋತ್ಸವ ನಡೆಯಲಿದೆ. ಬೆಳಗ್ಗೆ ೧೦ಕ್ಕೆ ದ್ವಾರಪೂಜೆ, ಚೂರ್ಣೋತ್ಸವ, ಮಧ್ಯಾಹ್ನ ೧.೩೦ಕ್ಕೆ ಅವಭೃತೋತ್ಸವ, ನದಿಸ್ನಾನ, ಸಂಜೆ ೬ಕ್ಕೆ ಧ್ವಜಾವರೋಹಣ, ಯಜ್ಞವಿಸರ್ಜನೆ, ಮಹಾಪೂಜೆ, ಸಂಪ್ರೋಕ್ಷಣೆ. ರಾತ್ರಿ ೧೦ಕ್ಕೆ ಮಹಾನೈವೇದ್ಯ, ಮಂಗಳಾರತಿ, ಸಮಾರಾಧನೆ. ೧ಕ್ಕೆ ಸಣ್ಣ ರಥೋತ್ಸವ, ೨ಕ್ಕೆ ಕಲಶದಾನ, ಅಂಕುರಪ್ರಸಾದ ವಿತರಣೆ, ವಸಂತಪೂಜೆ ನಡೆಯುವುದು.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts