ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ಉಪ ಸಮಿತಿ ಟ್ರೆಂಡ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಲೀಡರ್ಸ್ ಮೀಟ್ ಕಾರ್ಯಕ್ರಮವು ಬಂಟ್ವಾಳ ತಾಲೂಕಿನ ಬಿ.ಸಿರೋಡ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಶರೀಫ್ ಅಝ್ಹರಿ ದುಆ ನೇರವೇರಿಸಿದರು.ಟ್ರೆಂಡ್ ಜಿಲ್ಲಾಧ್ಯಕ್ಷ ಅಬ್ದುಲ್ ಸಮದ್ ಸಾಲೆತ್ತೂರು ಅಧ್ಯಕ್ಷತೆ ವಹಿಸಿದ್ದರು. ಟ್ರೆಂಡ್ ಕೇಂದ್ರ ಸಮಿತಿ ಅಧ್ಯಕ್ಷ ರಶೀದ್ ಮಾಸ್ಟರ್ ತರಬೇತಿ ನೀಡಿ ಶೈಕ್ಷಣಿಕ ಕ್ಷೇತ್ರದ ಸೇವೆಯ ಕುರಿತು ಮಾಹಿತಿ ನೀಡಿದರು.
ಟ್ರೆಂಡ್ ಕೇಂದ್ರ ಸಮಿತಿಯ ಅಂತರರಾಷ್ಟ್ರೀಯ ಪ್ರಾಜೆಕ್ಟ್ ಕಾರ್ಡಿನೇಟರ್ ಇಕ್ಬಾಲ್ ಬಾಳಿಲ ದಿಕ್ಸೂಚಿ ಭಾಷಣ ನೆರವೇರಿಸಿದರು. ಅಫ್ಹಮ್ ಅಲಿ ತಂಙಳ್, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಅಬ್ದುಲ್ ಖಾದರ್ ಮಾಸ್ಟರ್, ಕೋಶಾಧಿಕಾರಿ ಯು.ಪಿ ಬಶೀರ್ ಬೆಳ್ಳಾರೆ, ವೈಸ್ ಕನ್ವೀನರ್ ನಬ್ಸೀರ್, ಸಿದ್ದೀಕ್ ನಾವೂರ್, ಅಡ್ವಕೇಟ್ ನೌಶಾದ್ ಅನ್ಸಾರಿ, ಶಫೀಕ್ ಕಟ್ಟತ್ತಿಲ ಉಪಸ್ಥಿತರಿದ್ದರು. ಜಿಲ್ಲಾ ಕನ್ವೀನರ್ ಅಬ್ದುಸ್ಸಲಾಂ ಸ್ವಾಗತಿಸಿದರು. ವೈಸ್ ಚೈರ್ಮೆನ್ ಅಡ್ವಕೇಟ್ ಬದ್ರುದ್ದೀನ್ ಕುಕ್ಕಾಜೆ ಕಾರ್ಯಕ್ರಮವನ್ನು ನಿರೂಪಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…