ಬಂಟ್ವಾಳ: ಬಂಟ್ವಾಳ ತಾಲೂಕು ವೀರಕಂಬ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ದಿಲೀಪ್ ಕುಮಾರ್ ನಡ್ವಾಲು ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ಚುನಾವಣೆಯಲ್ಲಿ 12 ಸ್ಥಾನಗಳಿಗೆ ನಿರ್ದೇಶಕರುಗಳಾಗಿ ಆನಂದ ಮೂಲ್ಯ ಮೈರ, ಉಮಾವತಿ ಮಜಿ, ಉಮೇಶ್ ಮಜಿ, ಜಯಶೀಲ ಆಳ್ವ ನಡ್ಚಾಲು, ದಿಲೀಪ್ ಕುಮಾರ್ ನಡ್ಚಾಲು, ನಾರಾಯಣ ಮೂಲ್ಯ ಬೆತ್ತಸರವು, ಪದ್ಮನಾಭ ಗೌಡ ಮೈರ, ಪದ್ಮನಾಭ ಬಂಗೇರ ಮಜಿ, ವೀರಪ್ಪ ಮೂಲ್ಯ ಬೆತ್ತಸರವು, ತೇಜಕ್ಷಿ ಪಡೀಲ್ ,ಸುನಂದಾ ಕೆಲಿಂಜ ,ಕೇಶವ ನಾಯ್ಕ ಕೆಮ್ಮಟೆ, ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಸಂಘದ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷರಾಗಿದ್ದು ವೀರಕಂಬ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾದ ದಿಲೀಪ್ ಕುಮಾರ್ ನಡ್ಚಾಲು ಹಾಗೂ ಉಪಾಧ್ಯಕ್ಷರಾಗಿ ತೇಜಾಕ್ಷಿ ಪಡೀಲ್ ಆಯ್ಕೆಯಾಗಿರುತ್ತಾರೆ . ತ್ರಿವೇಣಿ ರಾವ್ ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರತಿಕ್ರಿಯೆ ನಡೆಸಿದರು. ಸಂಘದ ಕಾರ್ಯದರ್ಶಿ ಹರೀಶ್ ಬಂಗೇರ ಸಹಕರಿಸಿದರು.