ಬಂಟ್ವಾಳ: ಕಲ್ಲಡ್ಕ ಸಮೀಪ ನೆಟ್ಲದ ಮೊಗರ್ನಾಡು ಸಾವಿರ ಸೀಮೆಯ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಶ್ರೀ ದೇವರ ವರ್ಷಾವಧಿ ಜಾತ್ರೋತ್ಸವವು ಭಾನುವಾರ ಆರಂಭಗೊಂಡಿದ್ದು, 18ರವರೆಗೆ ನಡೆಯಲಿದೆ. 17ರಂದು ಮಹಾರಥೋತ್ಸವ ನಡೆಯಲಿದೆ.
ಬ್ರಹ್ಮಶ್ರೀ ನೀಲೇಶ್ವರ ವೇ.ಮೂ.ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯುವ ಜಾತ್ರೆಯಲ್ಲಿ ಭಾನುವಾರ ಧ್ವಜಾರೋಹಣ ನೆರವೇರಿದ್ದು, 16ರಂದು ನಡುಬಲಿ ಚಂದ್ರಮಂಡಲ ುತ್ಸವ ಮತ್ತು ಬುಧವಾರ ದರ್ಶನ ಬಲಿ ಉತ್ಸವ ಮತ್ತು ಶ್ರೀಮನ್ಮಹಾರಥೋತ್ಸವ ನೆರವೇರಲಿದೆ. ಭಾನುವಾರ ಶ್ರೀ ದುರ್ಗಾಲಯ ದೈವಸ್ಥಾನದಿಂದ ಶ್ರೀ ದುರ್ಗಾಲಯ ಪಿಲಿಚಾಮುಂಡಿ, ಪಂಜುರ್ಲಿ ದೈವಗಳ ಭಂಡಾರ ಆಗಮನ, ಶ್ರೀ ದೇವರಿಗೆ ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಧ್ವಜಾರೋಹಣ ನೆರವೇರಿತು. ರಾತ್ರಿ ಬಲಿ ಉತ್ಸವ, ಕಾರಂತರಕೋಡಿ ಶ್ಯಾನುಭಾಗರ ಕಟ್ಟೆಗೆ ಸವಾರಿ ನೆರವೇರಿತು.
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭಾನುವಾರ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ. ಸುಬ್ರಮಣ್ಯ ಭಟ್, ಸದಸ್ಯರಾದ ಪ್ರಧಾನ ಅರ್ಚಕ ವಿಜೇತ್ ಎನ್.ಹೊಳ್ಳ, ಪಿ.ಕುಮಾರಸ್ವಾಮಿ ನೆಟ್ಲ, ನವೀನ್ ಕುಮಾರ್ ಶೆಟ್ಟಿ ಚನಿಲ, ಸುಜಿತ್ ಕೊಟ್ಟಾರಿ, ಕಲ್ಲಡ್ಕ, ಅನಿಲ್ ದೇವಾಡಿಗ, ದಿವ್ಯಾ ರಮೇಶ ಪೂಜಾರಿ ಹೊಸಕಟ್ಟ, ಸುಚಿತ್ರಾ ಅನಂತ ಭಟ್ ಪಳನೀರು, ಭವ್ಯಾ ಐತಪ್ಪ ನಾಯ್ಕ ನೆಟ್ಲ, ಗೋಳ್ತಮಜಲು ಗ್ರಾಪಂ ಅಧ್ಯಕ್ಷ ಅಭಿಷೇಕ್ ಶೆಟ್ಟಿ, ಗಿರೀಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.