ಪುಂಜಾಲಕಟ್ಟೆ

ಹಳೆ ವಿದ್ಯಾರ್ಥಿ ಸಮ್ಮಿಲನ , ನೂತನ ಸಮಿತಿ ರಚನೆ ಸಭೆ

ಪುಂಜಾಲಕಟ್ಟೆ ಸರ್ಕಾರಿ ಪ್ರೌಢಶಾಲೆ

ಪುಂಜಾಲಕಟ್ಟೆ: ಇಲ್ಲಿನ ಸರಕಾರಿ ಪ್ರೌಢ ಶಾಲೆ(ಪ್ರಸ್ತುತ ಕರ್ನಾಟಕ ಪಬ್ಲಿಕ್ ಸ್ಕೂಲ್) ನ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಹಾಗೂ ಸಂಘದ ನೂತನ ಸಮಿತಿ ರಚನೆ ಸಭೆ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ , ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಹರ್ಷ ಸಂಪಿಗೆತ್ತಾಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಉಪ ಪ್ರಾಂಶುಪಾಲ ಉದಯ ಕುಮಾರ್ ಬಿ. ಮಾತನಾಡಿ, ಪುಂಜಾಲಕಟ್ಟೆ ಸರಕಾರಿ ಪ್ರೌಢಶಾಲೆ ಸ್ಥಾಪನೆಗೊಂಡು 63 ವರ್ಷ ಕಳೆಯುತ್ತಿದ್ದು, ಉತ್ತಮ ಹೆಸರು ಪಡೆದಿದೆ. ಇದರ ಹಳೆ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದಿದ್ದಾರೆ. ತನಗೆ ಶಿಕ್ಷಣ ನೀಡಿದ ಶಾಲೆಯ ಅಭ್ಯುದಯಕ್ಕೆ  ಸ್ವಯಂ ಸಹಕಾರ ನೀಡಿದಾಗ ಶಾಲೆಯ ಅಭಿವೃದ್ದಿ ಸಾಧ್ಯ ಎಂದರು. ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಗಿರೀಶ್ ಅನಿಲಡೆ, ಹಳೆ ವಿದ್ಯಾರ್ಥಿ,ನಿವೃತ್ತ ಬ್ಯಾಂಕ್ ಅಧಿಕಾರಿ ವಿಷ್ಣುದಾಸ್ ಬಾಳಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ಯಾಂ ಪ್ರಸಾದ್ ಸಂಪಿಗೆತ್ತಾಯ ಅವರು ಮಾತನಾಡಿ, ಸಂಘ ಶಾಲೆಯ ಸರ್ವೊತೋಮುಖ ಬೆಳವಣಿಗೆಯ ಧ್ಯೇಯ ಹೊಂದಿದ್ದು, ಹಳೆ ವಿದ್ಯಾರ್ಥಿಗಳು ತಮ್ಮ ಸಮಯ ಮೀಸಲಿರಿಸಿ ಸಹಕರಿಸಬೇಕಾಗಿ ವಿನಂತಿಸಿದರು.
ನೂತನ  ಸಮಿತಿಯ  ಕಾರ್ಯದರ್ಶಿಯಾಗಿ ಮಂಜಪ್ಪ ಮೂಲ್ಯ, ಮಾಧ್ಯಮ ಕಾರ್ಯದರ್ಶಿಯಾಗಿ  ರತ್ನದೇವ್ ಪುಂಜಾಲಕಟ್ಟೆ, ಕೋಶಾಧಿಕಾರಿ ಉದಯ ಕುಮಾರ್ ಬಿ, ಉಪಾಧ್ಯಕ್ಷರಾಗಿ ಬೇಬಿ ಕುಂದರ್, ವಿಠಲ ಪ್ರಭು ವಗ್ಗ , ಜತೆ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಮೇಲ್ಮನೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ  ಜಯರಾಮ ಶೆಟ್ಟಿ ಮುಂಡಾಡಿಗುತ್ತು, ರಾಜೇಂದ್ರ ಕೆ.ವಿ.,ಮೋಹನ ಆಚಾರ್ಯ ಕಾವಳಮೂಡೂರು, ಧರ್ಣಪ್ಪ ಗೌಡ ಎಚ್.,ಎಚ್.ಕೆ. ನಯನಾಡು, ಚಂದ್ರಶೇಖರ ಕರ್ಣ, ಗಣೇಶ್ ಕಾಮತ್, ರಮೇಶ್ ಶೆಟ್ಟಿ ಮಜಲೋಡಿ,  ದಿವಾಕರ ಶೆಟ್ಟಿ ಕಂಗಿತ್ತಿಲು, ಜಯರಾಜ ಅತ್ತಾಜೆ , ದಿನಕರ ಶೆಟ್ಟಿ ಅಂಕದಳ, ಗೌರವ ಸಲಹೆಗಾರರಾಗಿ ಡಾ. ಎಂ.ಎಚ್. ಸಂಪಿಗೆತ್ತಾಯ, ವಿಷ್ಣುದಾಸ ಬಾಳಿಗ, ವಿಶೇಷ ಆಹ್ವಾನಿತರಾಗಿ ಧರಣೇಂದ್ರ ಕೆ. ಜೈನ್,  ಪ್ರವೀಣ್ ಕುಮಾರ್ ದೋಟ ಅವರು ಆಯ್ಕೆಯಾದರು.ನಿರ್ಗಮನ ಅಧ್ಯಕ್ಷರು ನೂತನ ಅಧ್ಯಕ್ಷರಿಗೆ ದಾಖಲೆ ಲೆಕ್ಕಪತ್ರ ಹಸ್ತಾಂತರಿಸಿದರು. ಪ್ರವೀಣ್ ಕುಮಾರ್ ದೋಟ ಸ್ವಾಗತಿಸಿದರು. ಮಂಜಪ್ಪ ಮೂಲ್ಯ ವಂದಿಸಿದರು. ಶಿಕ್ಷಕ ಧರಣೇಂದ್ರ ಕೆ. ಜೈನ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.