ಕಲ್ಲಡ್ಕ

ನೇಪಾಳದಲ್ಲಿ ಜುಡೊ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಸಾಧಕ ಯುವಕರಿಗೆ ಕಲ್ಲಡ್ಕ ಮ್ಯೂಸಿಯಂನಲ್ಲಿ ಸನ್ಮಾನ

ಸನ್ಮಾನ ಕಾರ್ಯಕ್ರಮ ಕಲ್ಲಡ್ಕದಲ್ಲಿ ನಡೆಯಿತು.
1 / 9

ಬಂಟ್ವಾಳ: ನೇಪಾಳದಲ್ಲಿ ನಡೆದ  ಜುಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಕಲ್ಲಡ್ಕದ ಯುವ ಪ್ರತಿಭೆಗಳಾದ ನಿಶ್ಚಿತ್ ಕುಮಾರ್ ಮತ್ತು ಧನಂಜಯ ಬಾಳ್ತಿಲ ಅವರನ್ನು ಕಲ್ಲಡ್ಕ ಮ್ಯೂಸಿಯಂ ಮತ್ತು ತ್ರಿವರ್ಣ ಸಂಗಮ ಕಲ್ಲಡ್ಕ ವತಿಯಿಂದ ಶುಕ್ರವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಇಬ್ಬರನ್ನೂ ಸನ್ಮಾನಿಸಿ ಮಾತನಾಡಿದ ಕಲ್ಲಡ್ಕ ಮ್ಯೂಸಿಯಂನ ಮಾಲೀಕ ಮೊಹಮ್ಮದ್ ಯಾಸೀರ್, ಕಲ್ಲಡ್ಕದ ಪ್ರತಿಭೆಗಳು ಇಂದು ವಿದೇಶದಲ್ಲಿ ಸ್ಪರ್ಧೆಗಿಳಿದು ವಿಜೇತರಾಗಿ ಚಿನ್ನದ ಪದಕ ಗಳಿಸಿರುವುದು ಗಮನಾರ್ಹ ಸಾಧನೆಯಾಗಿದ್ದು, ಇವರು ಅಭಿನಂದನಾರ್ಹರು. ಜುಡೋ ಸ್ಪರ್ಧೆಯಲ್ಲಿ ಇನ್ನಷ್ಟು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಇಬ್ಬರಿಗೂ ಶಕ್ತಿ ದೊರಕಲಿ, ಇವರ ಸಾಧನೆ, ಪರಿಶ್ರಮಕ್ಕೆ ಮನ್ನಣೆ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಶುಭ ಹಾರೈಸಿದರು. ಈ ಸಂದರ್ಭ ಯೋಗೀಶ್, ರಾಜೇಶ್, ಜಗದೀಶ್, ಹನೀಫ್, ಹಿರಿಯರಾದ ಚಂದ್ರಹಾಸ ದಾಸ್  ಮತ್ತು ಇತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts