Uncategorized

ತುಳು ನಾಟಕ ಸ್ಪರ್ಧೆ ಫಲಿತಾಂಶ ಪ್ರಕಟ: ಇನಿಮುಟ್ಟ ಇಂಚಾತಿಜಿ ಪ್ರಥಮ, ಅರ್ಗಂಟ್ ದ್ವಿತೀಯ

ಬಂಟ್ವಾಳ: ಬಿ.ಸಿ.ರೋಡಿನ ಗೋಲ್ಡನ್ ಮೈದಾನದ ಕರಾವಳಿ  ಕಲೋತ್ಸವ-೨೦೨೧ ರ ಡಾ.ಎ.ಪಿ.ಜೆ ಕಲಾಂ ವೇದಿಕೆಯಲ್ಲಿ ನಡೆದ ನಾಟಕೋತ್ಸವದಲ್ಲಿ  ತುಳು ನಾಟಕ ಸ್ವರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ಕೊಯಿಲ‌ ತೆಲಿಕೆದ ಕಲಾವಿದೆರ್ ತಂಡದ  ಇನಿಮುಟ್ಟ ಇಂಚಾತಿಜಿ ನಾಟಕ ಪ್ರಥಮ ಬಹುಮಾನವನ್ನು‌ ಪಡೆದುಕೊಂಡಿದೆ.
ತಾಂಬೂಲ ಕಲಾವಿದೆರ್, ಪುಂಜಾಲಕಟ್ಟೆ  ಅರ್ಗಂಟ್ ದ್ವಿತೀಯ ಹಾಗೂ ಕಡೆಗೋಳಿ ರಂಗಧರಣಿ ಕಲಾವಿದೆರ್, ತಂಡ  ಗುರು ತೃತೀಯ ಸ್ಥಾನ ಪಡೆದಿದೆ.
ಉತ್ತಮ ನಿರ್ದೇಶನ ಸುರೇಶ್ ಕುಲಾಲ್ ಪ್ರಥಮ, ರಾಘವೇಂದ್ರ ಕಾರಂತ್ ದ್ವಿತೀಯ  ಸ್ಥಾನ ಪಡೆದುಕೊಂಡರೆ,ಉತ್ತಮನಟನಾಗಿ  ತೆಲಿಕೆದ ಕಲಾವಿದೆರ್ ತಂಡದ  ಸತೀಶ್ ಕಜೆಕಾರ್, ನಾವೂರು ಕಲಾನಿಧಿ ಕಲಾವಿದರೆ ತಂಡದ ವಿನೋದ್‌ರಾಜ್ ಹಳೆಗೇಟು  ದ್ವಿತೀಯ ಸ್ಥಾನ ಪಡೆದಿದ್ದಾರೆ.
ಉತ್ತಮ ನಟಿಯಾಗಿ ರಂಗಧರಣಿ ಕಲಾವಿದರು ತಂಡದ  ಸುರಕ್ಷಾ ಮುಡಿಪು ಪ್ರಥಮ ಹಾಗೂ ತಾಂಬೂಲ ಕಲಾವಿದೆರ್ ತಂಡದ – ಉಷಾ ದೇವರಾಜ್ ದ್ವಿತೀಯ ಸ್ಥಾನಗಳಿಸಿದ್ದಾರೆ.ಉತ್ತಮ ಹಾಸ್ಯನಟ:   ಕಲಾನಿಧಿ  ಕಲಾವಿದರು ತಂಡದ ಪ್ರಥ್ವಿನ್ ಪೊಳಲಿ ಪ್ರಥಮ ಹಾಗೂ  ತಾಂಬೂಲ ಕಲಾವಿದೆರ್ ತಂಡದ ಸುರೇಶ್ ಕುದ್ಕೋಳಿ ದ್ವಿತೀಯ ಸ್ಥಾನಗಳಿಸಿದ್ದಾರೆ.ಉತ್ತಮ ಹಾಸ್ಯನಟಿ:  ಕಲಾನಿಧಿ‌ ಕಲಾವಿದರು ತಂಡದ ಸತೀಶ್, ನಾವೂರು ಪ್ರಥಮ ಹಾಗೂ ರಂಗಧರಣಿ ಕಲಾವಿದರು ತಂಡದ ಹರೀಶ್, ಆಲದಪದವು ದ್ವಿತೀಯ ಸ್ಥಾನ ಪಡೆದಿದ್ದಾರೆ.ಉತ್ತಮ ಪೋಷಕ ನಟನಾಗಿ ತೆಲಿಕೆದ ಕಲಾವಿದೆರ್ ತಂಡದ ರಮಾ, ಬಿ.ಸಿ.ರೋಡು ಪ್ರಥಮ, ತಾಂಬೂಲ ಕಲಾವಿದೆರ್ ತಂಡದ   ಡಿ.ಎಸ್.ಬೋಳೂರು ದ್ವಿತೀಯ ಸ್ಥಾನ ಪಡೆದಿದ್ದಾರೆ. .ಉತ್ತಮ ಪೋಷಕ ನಟಿಯಾಗಿ ತಾಂಬೂಲ ಕಲಾವಿದೆರ್ ತಂಡದ  ಸುರಕ್ಷಾ, ನೆಲ್ಲಿಗುಡ್ಡೆ  ಪ್ರಥಮ ಹಾಗೂ ತೆಲಿಕೆದ ಕಲಾವಿದೆರ್ ತಂಡದ ಶ್ವೇತಾ ಆಳ್ವ,  ದ್ವಿತೀಯ ಸ್ಥಾನ ಪಡೆದಿದ್ದಾರೆ. ಉತ್ತಮ ಖಳನಟನಾಗಿ ರಂಗಧರಣಿ ಕಲಾವಿದರು ತಂಡದ ದಾಮೋದರ ಆಚಾರ್ಯ ವಗ್ಗ, ಪ್ರಥಮ ಹಾಗೂ ರಂಗಧರಣಿ ಕಲಾವಿದರು ತಂಡದ  ರಾಕೇಶ್ ಶೆಟ್ಟಿ ಬಿ.ಸಿ.ರೋಡ್, ದ್ವಿತೀಯ ಸ್ಥಾನ ಪಡೆದಿದ್ದಾರೆ, ಉತ್ತಮ ಖಳನಟಿಯಾಗಿ ಸತ್ಯದೇವತಾ ಕಲಾ ಆರ್ಟ್ಸ್, ಕನಪಾದೆ ತಂಡದ ಸುರೇಶ್ ಸರಪಾಡಿ ಪ್ರಥಮ ಸ್ಥಾನ ಪಡೆದಿದ್ದಾರೆ  ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಉದ್ಯಮಿ,ಬಿಜೆಪಿ ಮುಖಂಡ ಸುರೇಶ್ ಶೆಟ್ಟಿ ಗುರ್ಮೆ ಬಹುಮಾನ ವಿತರಿಸಿದರು.

ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,ಯಕ್ಷಗಾನ ಆರ್ಥದಾರಿ ಭಾಸ್ಕರ ರೈ ಕುಕ್ಕುವಳ್ಳಿ,ಬಂಟ್ವಾಳ ನಗರ ಠಾಣೆಯ ಎಸ್ ಅವಿನಾಶ್ ,ಪ್ರೊಬೆಷನರಿ ಎಸ್ ಐ. ಕೃಷ್ಣಕಾಂತ್ ಸಂಸ್ಥೆಯ ಗೌರವಾಧ್ಯಕ್ಷ,ವಕೀಲರಾದ ಜಯರಾಮರೈ, ತೀಪುಗಾರರಾದ ರಮೇಶ್ ರೈ ಕುಕ್ಕುವಳ್ಳಿ, ಅರುಣ್ ಶೆಟ್ಟಿ ಪೇಜಾವರ,ಸುಧೀರ್ ರಾಜ್ ಉರ್ವ  ಅವರು ವಿಜೇತರಿಗೆ ಬಹುಮಾನ ವಿತರಿಸಿದರು.ಕರಾವಳಿ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆ ವಹಿಸಿದ್ದರು.ಇದೇ ವೇಳೆ ಕಲೋತ್ಸವದ ಯಶಸ್ವಿಗೆ ದುಡಿದವರನ್ನು,ನಾಟಕ ತೀರ್ಪುಗಾರರನ್ನು ಅಭಿನಂದಿಸಲಾಯಿತು. ಚಿಣ್ಣರಲೋಕ ಮೋಕೆದ ಕಲಾವಿದರ್ ಸೇವಾ ಟ್ರಸ್ಟ್ ಸ್ಥಾಪಕ ಮೋಹನದಾಸ್ ಕೊಟ್ಟಾರಿ ಪ್ರಸ್ತಾವನೆಗೈದರು. ಸೌಮ್ಯ ಯಶವಂತ್ ಭಂಡಾರಿಬೆಟ್ಟು ಸ್ವಾಗತಿಸಿದರು.  ರತ್ನದೇವ್ ಪುಂಜಾಲಕಟ್ಟೆ ವಂದಿಸಿದರು. ಶೈಲಜಾರಾಜೇಶ್ ಕಾರ್ಯಕ್ರಮ ನಿರೂಪಿಸಿದರು.                  

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts