ಬಂಟ್ವಾಳ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು, ದ.ಕ. ಜಿಲ್ಲಾ ಪಂಚಾಯತ್, ಬಂಟ್ವಾಳ ತಾಲೂಕು ಪಂಚಾಯತ್ ವತಿಯಿಂದ ಬಂಟ್ವಾಳ ತಾಲೂಕು ಪಂಚಾಯತ್ ಎಸ್.ಜಿ.ಎಸ್. ವೈ. ಮತ್ತು ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳ ಸಾಮರ್ಥ್ಯಾಭಿವೃದ್ದಿ ತರಬೇತಿ ಕಾರ್ಯಗಾರಕ್ಕೆ ರಾಜ್ಯ ತರಬೇತಿ ಸಂಯೋಜಕ ಟಿ.ಎಂ.ಅಬುಬಕ್ಕರ್ ಭೇಟಿ ನೀಡಿ ಗ್ರಾ.ಪಂ. ಸದಸ್ಯರೊಂದಿಗೆ ಮಾತನಾಡಿದರು.
ಪಂಚಾಯತ್ ಸದಸ್ಯರು ಸಮಾಜದ ಜೊತೆಗೆ ಬೆರೆತಾಗ ಮಾತ್ರ ಗ್ರಾಮಸ್ವರಾಜ್ಯದ ಪರಿಕಲ್ಪನೆ ಸಾಕಾರಗೊಳ್ಳಲು ಸಾಧ್ಯ ಎಂದು ಟಿ.ಎಂ. ಅಬೂಬಕ್ಕರ್ ಹೇಳಿದರು. ಪಂಚಾಯತ್ ರಾಜ್ ಪರಿಕಲ್ಪನೆ, ಮೂಲ ಆಶಯ, ತರಬೇತಿಯ ರೂಪುರೇಷೆಯ ಕುರಿತು ವಿವರಿಸಿದ ಅವರು, ಎಲ್ಲಾ ಸದಸ್ಯರು ಬದಲಾಗಿರುವ ಪಂಚಾಯತ್ ರಾಜ್ ಕಾಯ್ದೆಯ ಬಗ್ಗೆ ಅರಿವನ್ನು ಪಡೆದುಕೊ ಳ್ಳಬೇಕು ಎಂದರು. ಸದಸ್ಯರಾಗಿ ಆಯ್ಕೆಯಾಗಿರುವುದು ನಿಮಗೆ ದೊರಕಿರುವ ದೊಡ್ಡ ಅವಕಾಶವಾಗಿದ್ದು, ಲೋಕನೌಕರ ಎನ್ನುವ ಮನೋಭಾವದೊಂದಿಗೆ ಗ್ರಾಮದ ಅಭಿವೃದ್ಧಿಯ ಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ತಾಲೂಕು ಪಂಚಾಯತ್ ಸಹಾಯಕ ಲೆಕ್ಕಾಧಿಕಾರಿ ಪ್ರಶಾಂತ್ ಬಳಂಜ, ತರಬೇತುದಾರರಾದ ಮಂಜುವಿಟ್ಲ, ಉಮಾನಾಥ ಶೆಟ್ಟಿ, ಮೌನೇಶ್ ವಿಶ್ವಕರ್ಮ, ಜಯಲಕ್ಷ್ಮಿ, ಫಾರೂಕ್ ಗೂಡಿನಬಳಿ ಈ ಸಂದರ್ಭದಲ್ಲಿ ಹಾಜರಿದ್ದರು.