ಬಂಟ್ವಾಳ

ಕುಕ್ಕಿಪಾಡಿ – ಸಂಪೂರ್ಣ ಸುರಕ್ಷಾ ನೋಂದಣಿ ಅಭಿಯಾನ ಉದ್ಘಾಟನೆ

ಬಂಟ್ವಾಳ: ಶ್ರೀ ಕ್ಷೇ.ಧ. ಗ್ರಾ.ಯೋಜನೆ (ರಿ) ಸಿದ್ಧಕಟ್ಟೆ ವಲಯದ 2021- 2022 ರ ಸಂಪೂರ್ಣ ಸುರಕ್ಷಾ ವಿಮಾ ನೋಂದಣಿ ಅಭಿಯಾನಕ್ಕೆ ಕುಕ್ಕಿ ಪಾಡಿ ಒಕ್ಕೂಟ ಅಧ್ಯಕ್ಷೆ ಮತ್ತು ಕುಕ್ಕಿಪಾಡಿ ಪಂಚಾಯತ್ ನೂತನ ಅಧ್ಯಕ್ಷೆ ಸುಜಾತ ರಾಜು ಪೂಜಾರಿಯವರು ದೀಪ ಬೆಳಗಿಸಿ ಚಾಲನೆ ನೀಡಿದರು. ಧರ್ಮಸ್ಥಳ ಕ್ಷೇತ್ರದ ಜನಹಿತ ಕಾರ್ಯಕ್ರಮಗಳಲ್ಲಿ ಒಂದಾದ ಸಂಪೂರ್ಣ ಸುರಕ್ಷಾ ಕಾರ್ಯಕ್ರಮವು ಎಲ್ಲರ ಆರೋಗ್ಯಕ್ಕೂ ರಕ್ಷಾ ಕವಚವಾಗಲಿ ಎಂದು ಶುಭ ಹಾರೈಸಿದರು.

ವಲಯ ಮೇಲ್ವಿಚಾರಕಿ ಶ್ರೀಮತಿ ಹರಿಣಾಕ್ಷಿ ರೈ ಅವರು ಸಂಪೂರ್ಣ ಸುರಕ್ಷಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟ ಪದಾಧಿಕಾರಿಗಳು , ಸದಸ್ಯರು, ಸೇವಾ ಪ್ರತಿನಿಧಿ ಹೇಮಲತಾ ಪಾಲ್ಗೊಂಡಿದ್ದರು.

NEWSDESK

Recent Posts