ಬಂಟ್ವಾಳ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ – ರಾಜಯೋಗ ಶಿಕ್ಷಣ – ಚಿತ್ರಪಟ ಪ್ರದರ್ಶನ

ಬಂಟ್ವಾಳ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಬಿ.ಸಿ.ರೋಡ್ ಶಾಖೆಯ ವತಿಯಿಂದ  ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಜರಗಿದ ಕೃಷಿ ಉತ್ಸವ-ಕಲೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಮೌಲ್ಯಾಧಾರಿತ , ಆಧ್ಯಾತ್ಮಿಕ, ಸಾಮಾಜಿಕ, ರಾಜಯೋಗ ಶಿಕ್ಷಣಗಳನ್ನೊಳಗೊಂಡ ಚಿತ್ರಪಟ ಪ್ರದರ್ಶನವನ್ನು ಮಾಜಿ ಸಚಿವರಾದ ಬಿ.ರಮಾನಾಥ ರೈ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಡಾ.ಎಂ.ಮೋಹನ್ ಆಳ್ವ, ಕಲಾ ಜಗತ್ತು ಮುಂಬಯಿಯ ತೋನ್ಸೆ ವಿಜಯಕುಮಾರ್ ಶೆಟ್ಟಿ, ಕೃಷಿ ಉತ್ಸವ-ಕರಾವಳಿ ಕಲೋತ್ಸವ ಅಧ್ಯಕ್ಷರಾದ ಸುದರ್ಶನ್ ಜೈನ್, ಸ್ಥಳೀಯ ಸೇವಾಕೇಂದ್ರ ಸಂಚಾಲಿಕೆ ಬ್ರಹ್ಮಕುಮಾರಿ ಸಾವಿತ್ರಿ, ಸಂಯೋಜಕ ಬ್ರಹ್ಮಕುಮಾರ್ ಗಣಪತಿ ಭಟ್, ಚಿಣ್ಣರ ಅಧ್ಯಕ್ಷೆ ಭಾಗ್ಯಶ್ರಿ, ಮಾಜಿ ಪುರಸಭಾ ಸದಸ್ಯ ಮಹಮ್ಮದ್ ನಂದರಬೆಟ್ಟು, ಪ್ರಕಾಶ್ ಶೆಟ್ಟಿ   ಶ್ರೀಶೈಲ ತುಂಬೆ, ಶರಧಿ ಜೈನ್ ಮತ್ತಿತರರು ಉಪಸ್ಥಿತರಿದ್ದರು.

NEWSDESK

Recent Posts